ಸಿಯೋಲ್: ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಲು ಯೋಜಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯ ನಡುವೆಯೇ ಭಾನುವಾರ ಮತ್ತೊಂದು ಅಪರಿಚಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
ಜಪಾನ್ ಮಾಹಿತಿ ಉಲ್ಲೇಖಿಸಿ, ದಕ್ಷಿಣ ಕೊರಿಯಾ ಅಧಿಕಾರಿಗಳು ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯನ್ನು ತನ್ನ ಪೂರ್ವ ಸಮುದ್ರದ ಕಡೆ ಹಾರಿಸಿದೆ ಎಂದು ತಿಳಿಸಿದ್ದಾರೆ. ಆದರೆ ಕ್ಷಿಪಣಿಯನ್ನು ಎಲ್ಲಿಂದ ಹಾರಿಸಲಾಯಿತು ಹಾಗೂ ಯಾವ ಗುರಿಗೆ ಹಾರಿಸಲಾಯಿತು ಎಂಬ ಬಗ್ಗೆ ತಿಳಿಸಿಲ್ಲ. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಉತ್ತರ ಕೊರಿಯಾ ಆರ್ಥಿಕ ನಿರ್ಬಂಧಗಳನ್ನು ಎಸುರಿಸುತ್ತಿದ್ದರೂ ಈ ವರ್ಷ ತನ್ನ ಶಸ್ತ್ರಾಸ್ತ್ರ ನವೀಕರಣ ಯೋಜನೆಗಳನ್ನು ದ್ವಿಗುಣಗೊಳಿಸಿದೆ. ತನ್ನ 7ನೇ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಶೀಘ್ರವೇ ನಡೆಸಲಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯ ಅಧಿಕಾರಿಗಳು ಕಳೆದ 1 ವಾರದಿಂದ ಹೇಳುತ್ತಲೇ ಇದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ
ಕಳೆದ ತಿಂಗಳು 3 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷಿಸಿದ್ದು, ಅವುಗಳಲ್ಲಿ ಅತಿದೊಡ್ಡ ಖಂಡಾಂತರ ಕ್ಷಿಪಣಿ ಹ್ವಾಸಾಂಗ್-17 ಕೂಡಾ ಇತ್ತು ಎಂದು ತಿಳಿದುಬಂದಿದೆ.