ಪೋನ್ಗ್ ಯಾಂಗ್: ಕೊರೊನಾ ವೈರಸ್ ಮೊದಲ ಪ್ರಕರಣ ಕಾಣಿಸಿಕೊಂಡ ಬೆನ್ನಲ್ಲೇ ಉತ್ತರ ಕೊರಿಯಾದಲ್ಲಿ 1 ಲಕ್ಷದ 74 ಸಾವಿರದ 440 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಅಲ್ಲದೆ ಒಂದೇ ದಿನ 27 ಮಂದಿ ಮೃತಪಟ್ಟಿದ್ದಾರೆ.
ಆದರೆ ಮೃತಪಟ್ಟಿರುವ 27 ಮಂದಿ ಕೊರೊನಾದಿಂದಲೇ ಮೃತಪಟ್ಟಿದ್ದಾರೆಯಾ ಎಂಬುದು ದೃಢವಾಗಿಲ್ಲ. ಮೇ ತಿಂಗಳಲ್ಲಿ ಇದುವರೆಗೆ 5,24,440 ಮಂದಿಗೆ ಜ್ವರ ಬಂದಿದೆ. ಇದರಲ್ಲಿ 2,43,630 ಮಂದಿ ಚೇತರಿಸಿಕೊಂಡಿದ್ದಾರೆ. ಇದು ಕೂಡ ಕೊರೊನಾದಿಂದ ಜ್ವರ ಬಂದಿದೆಯಾ ಇಲ್ಲವೋ ಎಂಬುದು ಖಚಿತವಾಗಿಲ್ಲ.
Advertisement
Advertisement
ಇದೇ ತಿಂಗಳ 13 ರಂದು ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಅಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್ ಘೋಷಣೆ
Advertisement
ಈ ಸಂಬಂಧ ಅಲ್ಲಿನ ತಜ್ಞರು, ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ದೇಶದ 2.5 ಕೋಟಿ ಜನರು ಲಸಿಕೆ ಪಡೆಯದೇ ಇರುವ ಕಾರಣ ಕೋವಿಡ್ ಪ್ರಕರಣ ಎದುರಿಸಲು ಕಷ್ಟವಾಗಬಹುದು ಎಂದು ತಿಳಿಸಿದ್ದಾರೆ.