ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ (North Korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ( Kim Jong Un) ಅವರ ನಿರ್ಧಾರಗಳು ಮತ್ತು ವಿಚಿತ್ರ ಹೇಳಿಕೆಗಳಿಗಾಗಿ ಜಗತ್ತಿಗೆ ತಿಳಿದಿದೆ. ಇದೀಗ ಹೇಳಿಕೆಯೊಂದನ್ನು ನೀಡುವ ಮೂಲಕ ಕಿಮ್ ಮತ್ತೆ ಸುದ್ದಿಯಲ್ಲಿದ್ದಾರೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತನ್ನ ನೆರೆಯ ದಕ್ಷಿಣ ಕೊರಿಯಾವನ್ನು (South Korea) ತನ್ನ ದೊಡ್ಡ ಶತ್ರು ಎಂದು ಪರಿಗಣಿಸುತ್ತಾರೆ. ಹೀಗಾಗಿ ದಕ್ಷಿಣ ಕೊರಿಯಾವನ್ನು ಎದುರಿಸಲು ಕಿಮ್, ತನ್ನ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುತ್ತಿದ್ದಾರೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯ ಗುಂಡಿನ ದಾಳಿಗೆ ಉಗ್ರ ಮಟಾಷ್
North Korean leader Kim Jong Un says now is time to be ready for war, reports Reuters, citing KCNA.
— ANI (@ANI) April 10, 2024
ಮಾಧ್ಯಮ ವರದಿ ಪ್ರಕಾರ, ಕಿಮ್ ಜಾಂಗ್ ಉನ್ ಅವರು ದೇಶದ ಪ್ರಮುಖ ಮಿಲಿಟರಿ ವಿಶ್ವವಿದ್ಯಾಲಯವನ್ನು ಪರಿಶೀಲಿಸಲು ಬುಧವಾರ ಆಗಮಿಸಿದರು. ಈ ಸಂದರ್ಭದಲ್ಲಿ ದೇಶಾದ್ಯಂತ ಎಲ್ಲವೂ ಸರಿಯಾಗಿಲ್ಲ. ಇದರರ್ಥ ನಾವು ಈಗ ಹಿಂದೆಂದಿಗಿಂತಲೂ ಹೆಚ್ಚು ಯುದ್ಧಕ್ಕೆ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ
ತಮ್ಮ ದೇಶದ ಸುತ್ತಮುತ್ತಲಿನ ಅಸ್ಥಿರ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳನ್ನು ನೋಡಿದಾಗ ಯುದ್ಧದ ಸಮಯಕ್ಕೆ ಸಿದ್ಧರಾಗುವಂತಿದೆ ಎಂದು ತಿಳಿಸಿದ್ದಾರೆ.