ಪ್ಯೊಂಗ್ಯಾಂಗ್: ಕ್ರೈಸ್ತರ ಪವಿತ್ರಗ್ರಂಥವಾದ ಬೈಬಲ್ (Bible) ಹೊಂದಿದ್ದಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಉತ್ತರ ಕೊರಿಯಾದಲ್ಲಿ (North Korea) ನಡೆದಿದೆ.
ಬೈಬಲ್ನೊಂದಿಗೆ ಸಿಕ್ಕಿಬಿದ್ದ ಉತ್ತರ ಕೊರಿಯಾದ ಕ್ರಿಶ್ಚಿಯನ್ನರು ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ. ಮಕ್ಕಳು ಸೇರಿದಂತೆ ಅವರ ಕುಟುಂಬಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವರದಿಯು ಬಹಿರಂಗಪಡಿಸಿದೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!
Advertisement
Advertisement
2022 ರ ರಾಜ್ಯ ಇಲಾಖೆಯ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯು, ಉತ್ತರ ಕೊರಿಯಾದಲ್ಲಿ 70,000 ಕ್ರಿಶ್ಚಿಯನ್ನರನ್ನು (ಇತರೆ ಧರ್ಮಗಳನ್ನು ಅನುಸರಿಸುವ ಜನರು ಸೇರಿದಂತೆ) ಬಂಧಿಸಲಾಗಿದೆ ಎಂದು ಅಂದಾಜಿಸಿದೆ. ಸೆರೆಮನೆಗೆ ಕಳುಹಿಸಲಾದ ಅನೇಕರಲ್ಲಿ ಎರಡು ವರ್ಷದ ಮಗುವೂ ಸೇರಿದೆ ಎಂದು ವರದಿಯು ತಿಳಿಸಿದೆ.
Advertisement
ಕ್ರೈಸ್ತ ಧರ್ಮ ಆಚರಣೆ ಮತ್ತು ಬೈಬಲ್ ಹೊಂದಿದ್ದಕ್ಕಾಗಿ ಕುಟುಂಬವನ್ನು ಬಂಧಿಸಲಾಯಿತು. ಎರಡು ವರ್ಷದ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬಂಧನಕ್ಕೊಳಗಾಗಿರುವ ಕ್ರಿಸ್ಚಿಯನ್ನರು ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ದೈಹಿಕ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು
Advertisement
ಉತ್ತರ ಕೊರಿಯಾದ ಸರ್ಕಾರವು ಧಾರ್ಮಿಕ ಆಚರಣೆಗಳಲ್ಲಿ ತೊಡಗಿರುವ, ಧಾರ್ಮಿಕ ವಸ್ತುಗಳನ್ನು ಹೊಂದಿರುವ ಮತ್ತು ಧರ್ಮ ಪ್ರಚಾರಕರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಕಿರುಕುಳ ನೀಡುತ್ತದೆ ಎಂದು ಹೇಳಲಾಗಿದೆ.
ಡಿಸೆಂಬರ್ 2021 ರಲ್ಲಿ, ಕೊರಿಯಾ ಫ್ಯೂಚರ್ ಸಂಸ್ಥೆಯು ಉತ್ತರ ಕೊರಿಯಾದಲ್ಲಿ ಧಾರ್ಮಿಕ ಆಚರಣೆ ಕಾರಣಕ್ಕಾಗಿ ಮಹಿಳೆಯರ ವಿರುದ್ಧ ನಡೆದಿರುವ ಚಿತ್ರಹಿಂಸೆ ಕುರಿತು ವರದಿಯನ್ನು ಬಿಡುಗಡೆ ಮಾಡಿತು. ದೌರ್ಜನ್ಯವನ್ನು ಅನುಭವಿಸಿದ 151 ಕ್ರಿಶ್ಚಿಯನ್ ಮಹಿಳೆಯರನ್ನು ಸಂದರ್ಶನಕ್ಕೆ ಒಳಪಡಿಸಿ ವರದಿ ಮಾಡಲಾಗಿತ್ತು. ಅನಿಯಂತ್ರಿತ ಬಂಧನ, ಚಿತ್ರಹಿಂಸೆ, ಗಡಿಪಾರು, ಬಲವಂತದ ದುಡಿಮೆ ಮತ್ತು ಲೈಂಗಿಕ ಹಿಂಸೆ ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.