ಪ್ಯೊಂಗ್ಯಾಂಗ್: ಇಬ್ಬರು ವಿದ್ಯಾರ್ಥಿಗಳು ದಕ್ಷಿಣ ಕೊರಿಯಾದ ಡ್ರಾಮಾವನ್ನು (South Korean Drama) ವೀಕ್ಷಿಸಿದ ಹಿನ್ನೆಲೆಯಲ್ಲಿ ಆ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿದ ಘಟನೆ ಉತ್ತರ ಕೊರಿಯಾದಲ್ಲಿ (North Korea) ನಡೆದಿದೆ.
ಉತ್ತರ ಕೊರಿಯಾದ ರಿಯಾಂಗ್‍ಗಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಈ ಭಾಗವು ಚೀನಾದ ಗಡಿ ಭಾಗದ ಸಮೀಪವಿದೆ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸುಲಭವಾಗಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಸಿನಿಮಾಗಳು ಸುಲಭವಾಗಿ ಸಿಗುತ್ತವೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳಿಗೂ ಕೆ- ಡ್ರಾಮಾ ದೊರೆತಿದಿದ್ದು, ಇದನ್ನು ವೀಕ್ಷಿಸಿದ್ದಾರೆ.
Advertisement
Advertisement
ತಾವು ವೀಕ್ಷಿಸಿದ ದಕ್ಷಿಣ ಕೊರಿಯಾದ ಕೆ-ಡ್ರಾಮಾವನ್ನು ಈ ಇಬ್ಬರು ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೂ ನೀಡಿದ್ದಾರೆ. ಆದರೆ ಉತ್ತರ ಕೋರಿಯಾದಲ್ಲಿ ದಕ್ಷಿಣ ಕೋರಿಯಾದ ಸಿನಿಮಾ, ಡ್ರಾಮಾವನ್ನು ವೀಕ್ಷಿಸುವುದು ಕಾನೂನು ಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಕಿಮ್ ಜಾಂಗ್ ಉನ್ ( Kim Jong Un) ಸರ್ಕಾರವು ಆ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳನ್ನು ಗಲ್ಲಿಗೇರಿಸಿದ್ದಾರೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ವಾಯುಭಾರ ಕುಸಿತ – ನಾಳೆಯಿಂದ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಶುರು
Advertisement
Advertisement
ಕೊರಿಯನ್ ಡ್ರಾಮಾ ವೀಕ್ಷಿಸಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಸಾರ್ವಜನಿಕರ ಮುಂದೆ ದಕ್ಷಿಣ ಕೊರಿಯಾದ ಪೊಲೀಸರು ಕರೆತಂದಿದ್ದಾರೆ. ಅದಾದ ಬಳಿಕ ಅವರಿಗೆ ಮರಣದಂಡನೆ ವಿಧಿಸಿದ್ದಾರೆ. ಅದಾದ ಬಳಿಕ ಏರ್‌ಫೀಲ್ಡ್‌ನಲ್ಲಿ ಅಧಿಕಾರಿಗಳು ಆ ಇಬ್ಬರು ವಿದ್ಯಾರ್ಥಿಗಳನ್ನು ಹೊಡೆದುರುಳಿಸಿದರು ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ