Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಿಮ್‌ ಪರ 99.93% ಮತ ಬಿದ್ದರೂ 0.07% ಹೋಗಿದ್ದು ಯಾರಿಗೆ – ವಿಶ್ವಾದ್ಯಂತ ಭಾರೀ ಸದ್ದು ಮಾಡಿದ ಪ್ರಶ್ನೆಗೆ ಸಿಕ್ತು ಉತ್ತರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕಿಮ್‌ ಪರ 99.93% ಮತ ಬಿದ್ದರೂ 0.07% ಹೋಗಿದ್ದು ಯಾರಿಗೆ – ವಿಶ್ವಾದ್ಯಂತ ಭಾರೀ ಸದ್ದು ಮಾಡಿದ ಪ್ರಶ್ನೆಗೆ ಸಿಕ್ತು ಉತ್ತರ

Latest

ಕಿಮ್‌ ಪರ 99.93% ಮತ ಬಿದ್ದರೂ 0.07% ಹೋಗಿದ್ದು ಯಾರಿಗೆ – ವಿಶ್ವಾದ್ಯಂತ ಭಾರೀ ಸದ್ದು ಮಾಡಿದ ಪ್ರಶ್ನೆಗೆ ಸಿಕ್ತು ಉತ್ತರ

Public TV
Last updated: March 19, 2026 7:47 pm
Public TV
Share
2 Min Read
Kim Jong Un
SHARE

ಪ್ಯೊಂಗ್ಯಾಂಗ್: ಉತ್ತರ ಕೊರಿಯಾ (North Korea) ಸಂಸತ್‌ ಚುನಾವಣೆಯಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಅವರ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಮತ್ತು ಮಿತ್ರ ಗುಂಪುಗಳು 99.93% ಮತ ಪಡೆದು  ಭರ್ಜರಿ ಜಯಗಳಿಸಿದ್ದರೂ 0.07% ಮತ ಹೋಗಿದ್ದು ಯಾರಿಗೆ? –  ವಿಶ್ವಾದ್ಯಂತ ಭಾರೀ ಸದ್ದು ಮಾಡಿದ್ದ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಮಾರ್ಚ್ 15 ರಂದು 15 ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಯ (15th Supreme People’s Assembly) ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರತಿಯೊಂದು ಸ್ಥಾನವನ್ನು ಗೆದ್ದಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.

ನೋಂದಾಯಿತ ಮತದಾರರಲ್ಲಿ ಕೇವಲ 0.0037 ಪ್ರತಿಶತದಷ್ಟು ಜನರು ವಿದೇಶದಲ್ಲಿ ಅಥವಾ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಮತವನ್ನು ಚಲಾಯಿಸಲು ಸಾಧ್ಯವಾಗಲಿಲ್ಲ. ಆದರೆ ಅತ್ಯಂತ ಕಡಿಮೆ ಸಂಖ್ಯೆಯ ಸುಮಾರು 0.00003 ಪ್ರತಿಶತದಷ್ಟು ಜನರು ಮತದಾನ ಪ್ರಕ್ರಿಯೆಯಿಂದ ದೂರವಿದ್ದರು ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಜಸ್ಟ್‌ ಒಂದು ರಾಜೀನಾಮೆಗೆ ಕರಗಿತು 1 ಲಕ್ಷ ಕೋಟಿ!

Kim Jong Un north korea militery

0.07 ಪ್ರತಿಶತ ಮತ ಹೋಗಿದ್ದು ಯಾರಿಗೆ?
ಈ ಚುನಾವಣೆಯಲ್ಲಿ ಯಾವುದೇ ವಿರೋಧ ಪಕ್ಷದ ಅಭ್ಯರ್ಥಿಗಳು ಇರದ ಕಾರಣ ಪ್ರತಿಸ್ಪರ್ಧಿಗೆ ಮತ ಹೋಗಿಲ್ಲ. ಪ್ರತಿ ಕ್ಷೇತ್ರದಲ್ಲಿ ಮತದಾರರಿಗೆ ಕಣದಲ್ಲಿರುವ ಅಭ್ಯರ್ಥಿಯನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕು ಎಂಬ ಆಯ್ಕೆಯನ್ನು ಮಾತ್ರ ನೀಡಲಾಗಿತ್ತು. ಮತ ಹಾಕಿದವರ ಪೈಕಿ 99.93% ರಷ್ಟು ಮಂದಿ ಸರ್ವಾಧಿಕಾರಿಯ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರೆ 0.07% ರಷ್ಟು ಜನ ವಿರೋಧಿಸಿ ಮತ ಹಾಕಿದ್ದಾರೆ.

1957 ರಿಂದ ಸರ್ವಾಧಿಕಾರಿ ಅಭ್ಯರ್ಥಿಗೆ ಉತ್ತರ ಕೊರಿಯಾದ ಜನತೆ ಮತ ಹಾಕುತ್ತಿದ್ದರು. ಆದರೆ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಸಂಸತ್ತಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ತಿರಸ್ಕರಿಸಿದ ವಿಚಾರವನ್ನು ಬಹಿರಂಗ ಪಡಿಸಿದ್ದು ಇದೇ ಮೊದಲು.

ದೇಶದ ಚುನಾವಣಾ ಕಾನೂನುಗಳ ಪ್ರಕಾರ, ಕಾರ್ಮಿಕರು, ರೈತರು, ಬುದ್ಧಿಜೀವಿಗಳು, ಮಿಲಿಟರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 687 ಪ್ರತಿನಿಧಿಗಳನ್ನು ಸುಪ್ರೀಂ ಪೀಪಲ್ಸ್ ಅಸೆಂಬ್ಲಿಗೆ ಆಯ್ಕೆ ಮಾಡಲಾಗಿದೆ.

2011 ರಲ್ಲಿ ತಂದೆ ಕಿಮ್ ಜಾಂಗ್ ಇಲ್ ನಿಧನರಾದ ನಂತರ ಕಿಮ್ ಜಾಂಗ್ ಉನ್ ಅಧಿಕಾರ ಸ್ವೀಕರಿಸಿದ್ದಾರೆ. 2019 ರಲ್ಲಿ ಉತ್ತರ ಕೊರಿಯಾ ತನ್ನ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಲು ತನ್ನ ಸಂವಿಧಾನದಲ್ಲಿ ಬದಲಾವಣೆ ಮಾಡಿದೆ. ಈಗ ಸರ್ಕಾರ, ಮಿಲಿಟರಿ, ರಾಜ್ಯ ಸಂಸ್ಥೆಗಳ ಮುಖ್ಯಸ್ಥರಾಗಿ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ.

TAGGED:electionKim Jong Unnorth koreaಉತ್ತರ ಕೊರಿಯಾಕಿಮ್ ಜಾಂಗ್ ಉನ್ಚುನಾವಣೆ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

CSK 3
Cricket

ಕೋಲ್ಕತ್ತಾಗೆ 4ನೇ ಸೋಲು- ಚೆನ್ನೈಗೆ 32 ರನ್‌ಗಳ ಸೂಪರ್‌ ಜಯ, ಮುಂಬೈ ಹಿಂದಿಕ್ಕಿದ ಕಿಂಗ್ಸ್‌

Public TV
By Public TV
5 hours ago
Rayareddy
Districts

25 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಿ: ಬಸವರಾಜ ರಾಯರೆಡ್ಡಿ

Public TV
By Public TV
6 hours ago
IPL all teams captains
Cricket

ಆಸ್ಟ್ರೇಲಿಯಾದಲ್ಲಿ ಐಪಿಎಲ್‌, ಭಾರತದಲ್ಲಿ ಬಿಗ್‌ ಬ್ಯಾಷ್‌ ಲೀಗ್‌ – ಆಡಿಲೇಡ್‌ನಲ್ಲಿ ಪಂದ್ಯ ಆಯೋಜನೆಗೆ ಭಾರೀ ಚರ್ಚೆ

Public TV
By Public TV
6 hours ago
Yogesh Gowda murder case final verdict postponed to April 15 Vinay Kulkarni
Bengaluru City

ಯೋಗೀಶ್ ಗೌಡ ಕೊಲೆ ಕೇಸ್; 10 ವರ್ಷಗಳ ಬಳಿಕ ಬುಧವಾರ ಕೋರ್ಟ್ ತೀರ್ಪು – ವಿನಯ್ ಕುಲಕರ್ಣಿಗೆ ಟೆನ್ಷನ್

Public TV
By Public TV
7 hours ago
AYODHYA
Bengaluru City

ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ರಾಜ್ಯದ 10 ಕಾಂಗ್ರೆಸ್‌ ಶಾಸಕರು

Public TV
By Public TV
7 hours ago
PM Narendra Modi Inaugurates Delhi Dehradun Expressway
Latest

ದೆಹಲಿ-ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ – ಸಂಚಾರ 6 ಗಂಟೆಯಿಂದ 2.5 ಗಂಟೆಗೆ ಇಳಿಕೆ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?