ಬೀಜಿಂಗ್: ಅಮೆರಿಕ (America) ಮತ್ತು ಚೀನಾ (China) ನಡುವೆ ತಲೆದೋರಿರುವ ಉದ್ವಿಗ್ನತೆ ನಡುವೆ, ಉತ್ತರ ಕೊರಿಯಾ (North Korea) ಮಿಲಿಟರಿ ಸಾಮರ್ಥ್ಯಗಳ ಬಗ್ಗೆ ಚೀನಾದ ರಕ್ಷಣಾ ವಿಜ್ಞಾನಿಗಳು ಹೇಳಿಕೆ ನೀಡಿದ್ದಾರೆ. ಉತ್ತರ ಕೊರಿಯಾವು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಂದಿದ್ದು, ಅದು ಕೇವಲ 33 ನಿಮಿಷಗಳಲ್ಲಿ ಅಮೆರಿಕವನ್ನು ವಿನಾಶಗೊಳಿಸಬಹುದು ಎಂದಿದ್ದಾರೆ.
ಉತ್ತರ ಕೊರಿಯಾದ ಕ್ಷಿಪಣಿಯು ಮಧ್ಯ ಅಮೆರಿಕವನ್ನು 1,997 ಸೆಕೆಂಡುಗಳಲ್ಲಿ ಅಂದರೆ ಸರಿಸುಮಾರು 33 ನಿಮಿಷಗಳಲ್ಲಿ ತಲುಪಬಹುದು (ಯುಎಸ್ ಕ್ಷಿಪಣಿ ರಕ್ಷಣಾ ಜಾಲವು ಉ.ಕೊರಿಯಾ ಕ್ಷಿಪಣಿಯನ್ನು ಪ್ರತಿಬಂಧಿಸಲು ವಿಫಲವಾದರೆ) ಎಂದು ಚೀನಾದ ರಕ್ಷಣಾ ತಜ್ಞರು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಗ್ನಿ ದುರಂತ – ಮನೆಯಲ್ಲಿ ಮಲಗಿದ್ದ 10 ಮಂದಿ ಸಜೀವ ದಹನ
Advertisement
Advertisement
ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಇಂಜಿನಿಯರಿಂಗ್‌ನ ಟ್ಯಾಂಗ್ ಯುವಾನ್ ನೇತೃತ್ವದ ಸಂಶೋಧನಾ ತಂಡದ ಪ್ರಕಾರ, ಉತ್ತರ ಕೊರಿಯಾ ಕ್ಷಿಪಣಿಯು ಎರಡು ಹಂತದ ಪರಮಾಣು-ಸಾಮರ್ಥ್ಯದ ಅಸ್ತ್ರವಾಗಿದ್ದು, 13,000 ಕಿಮೀ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ತಲುಪುವ ಸಾಮರ್ಥ್ಯ ಹೊಂದಿದೆ. ಇದು ಇಡೀ ಅಮೆರಿಕವನ್ನು ನಾಶ ಮಾಡಲು ಸಾಕು ಎಂದು ತಿಳಿಸಿದೆ.
Advertisement
Advertisement
ಉತ್ತರ ಕೊರಿಯಾದ ಹ್ವಾಸಾಂಗ್-15 ಕ್ಷಿಪಣಿಯ (Hwasong-15 Missile) ಟಾರ್ಗೆಟ್ ಮಧ್ಯ ಅಮೆರಿಕದ ಮಿಸೌರಿ ರಾಜ್ಯದಲ್ಲಿರುವ ಕೊಲಂಬಿಯಾ ಎಂದು ಚೀನಾ ತಜ್ಞರು ಹೇಳಿದ್ದಾರೆ. ಚೀನಾದ ಸಂಶೋಧನೆಯ ಕುರಿತು USನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಚೀನಾದ ಸಂಶೋಧನೆಯು US ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಒತ್ತಿಹೇಳಿದೆ. ಉತ್ತರ ಕೊರಿಯಾವನ್ನು ಒಳಗೊಂಡ ಸಂಘರ್ಷವು ಜಾಗತಿಕ ಬಿಕ್ಕಟ್ಟಾಗಿ ಉಲ್ಬಣಗೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪತನದ ಭೀತಿಯಲ್ಲಿ ಮತ್ತೊಂದು ಬ್ಯಾಂಕ್ – ಕ್ರೆಡಿಟ್ ಸ್ಯೂಸಿ ಸಹಾಯಕ್ಕೆ ನಿಂತ ಸ್ವಿಸ್ ಬ್ಯಾಂಕ್
ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವೆ ಸೇನಾ ಸಮರಾಭ್ಯಾಸ ನಡೆಯುತ್ತಿರುವಾಗಲೇ ಈ ಎಚ್ಚರಿಕೆ ಹೇಳಿಕೆ ಬಂದಿದೆ. ಉತ್ತರ ಕೊರಿಯಾ ಕೂಡ ಅಮೆರಿಕ ವಿರುದ್ಧ ಬೆದರಿಕೆ ಹಾಕಿದೆ. ಪ್ರಶ್ನಾರ್ಹವಾದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉತ್ತರ ಕೊರಿಯಾ ಇತ್ತೀಚೆಗೆ ಜಪಾನ್ ಗಡಿಯ ಬಳಿ ಉಡಾಯಿಸಿತ್ತು. ಇದು ಪರಮಾಣು ಸಾಮರ್ಥ್ಯದ ಅಸ್ತ್ರವಾಗಿದೆ.