ಸಿಯೋಲ್: ಉತ್ತರ ಕೊರಿಯಾ ತನ್ನ ಹಿರಿಯ ರಾಜತಾಂತ್ರಿಕ ಚೋ ಸೋನ್-ಹುಯಿ ಅವರನ್ನು ದೇಶದ ಮೊದಲ ಮಹಿಳಾ ವಿದೇಶಾಂಗ ಸಚಿವೆಯಾಗಿ ನೇಮಿಸಿದೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಆಗಾಗ ಬೆದರಿಕೆ ಒಡ್ಡುತ್ತಲೇ ಇರುವ ಹಾಗೂ ಅಮೆರಿಕದೊಂದಿಗಿನ ಮಾತುಕತೆಗೆ ನಿರ್ಲಕ್ಷ್ಯ ತೋರುತ್ತಿರುವ ಉತ್ತರ ಕೊರಿಯಾ ಈ ನಡುವೆಯೇ ಹೊಸ ಮಹಿಳಾ ವಿದೇಶಾಂಗ ಸಚಿವೆಯನ್ನು ನೇಮಕ ಮಾಡಿದೆ.
ಈ ಹಿಂದೆ ಉತ್ತರ ಕೊರಿಯಾದ ಉಪ ವಿದೇಶಾಂಗ ಸಚಿವೆಯಾಗಿದ್ದ ಚೋ, ಮಾಜಿ ಮಿಲಿಟರಿ ಅಧಿಕಾರಿ ರಿ ಸನ್ ಗ್ವಾನ್ ಅವರ ಸ್ಥಾನವನ್ನು ತುಂಬಲಿದ್ದಾರೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲ ಚೋ ವಿದೇಶೀ ನಾಯಕರೊಂದಿಗೆ ಸಂವಹನ ನಡೆಸುವ ಮೂಲಕ ಕಿಮ್ ಜಾಂಗ್ ಉನ್ ಆಡಳಿತಕ್ಕೆ ಬಲ ನೀಡಲಿದ್ದಾರೆ. ಇದನ್ನೂ ಓದಿ: ಎಸ್‍ಡಿಪಿಐ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸರು
ಚೋ ಈ ಹಿಂದೆಯೂ ಅಮೆರಿಕದೊಂದಿಗೆ ಪರಮಾಣು ಮಾತುಕತೆ ಸಂದರ್ಭ ಹಾಗೂ ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶೃಂಗಸಭೆಯಲ್ಲೂ ಭಾಗವಹಿಸಿದ್ದರು. ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಎನ್‍ಕೌಂಟರ್ – ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಓರ್ವ ಹತ್ಯೆ
ಉತ್ತರ ಕೊರಿಯಾ ಶಸ್ತ್ರಾಸ್ತ್ರ ನಿರ್ಭಂಧಗಳನ್ನು ತಳ್ಳಿಹಾಕಿ, ಪರೀಕ್ಷೆಗಳನ್ನು ನಡೆಸುತ್ತಿದೆ. ಅದರಲ್ಲೂ 2017ರಲ್ಲಿ ಮೊದಲ ಬಾರಿಗೆ ಖಂಡಾಂತರ ಕ್ಷಿಪಣಿಯನ್ನೂ ಹಾರಿಸಿದೆ. ಕೆಲವು ದಿನಗಳ ಹಿಂದೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಅಧಿಕಾರಿಗಳು ಉತ್ತರ ಕೊರಿಯಾ ತನ್ನ 7ನೇ ಪರಮಾಣು ಪರೀಕ್ಷೆಯನ್ನು ನಡೆಸಲು ತಯಾರಿ ನಡೆಸುತ್ತಿದೆ ಎಂದು ಎಚ್ಚರಿಸಿದ್ದಾರೆ.