ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಇದೇ ಜನವರಿ 21 ಮತ್ತು 22 ರಂದು ಉತ್ತರ ಕರ್ನಾಟಕ ಉತ್ಸವ 2023 (Uttara Karnataka 2023) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ದಿನ ನಡೆಯುವ ಉತ್ಸವದಲ್ಲಿ ಉತ್ತರ ಕರ್ನಾಟಕ ಸಂಸ್ಕೃತಿ, ಪರಂಪರೆ ಅನಾವರಣಗೊಳಿಸುವ ಕಾರ್ಯಕ್ರಮ ಇದಾಗಿದೆ.
ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯು ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉತ್ತರ ಕರ್ನಾಟಕ ಉತ್ಸವ 2023 ಯನ್ನು ಬೆಂಗಳೂರಿನ ಅರಮನೆ ಮೈದಾನದ ಶೀಶ್ ಮಹಾಲ್ ಪ್ಯಾಲೇಸ್ ಗೇಟ್ ನಂಬರ್ 7 ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ತಾಖತ್, ಶಕ್ತಿ ಇದ್ರೆ ಯೂ ಟರ್ನ್ ಮಾಡದೆ ಸ್ಪರ್ಧೆ ಮಾಡಲಿ: ವರ್ತೂರು ಪ್ರಕಾಶ್ ಸವಾಲ್
Advertisement
ಉತ್ತರ ಕರ್ನಾಟಕ ಭಾಗದಿಂದ ವಿವಿಧ ಉದ್ಯೋಗ ಅರಸಿ ಬಂದು ಬೆಂಗಳೂರು ಮಹಾ ನಗರದಲ್ಲಿ ನೆಲೆಸಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ವಿವಿಧ ಬಡಾವಣೆಯಲ್ಲಿ ಸಂಘಗಳನ್ನು ಕಟ್ಟಿಕೊಂಡಿದ್ದು, ಈ ಎಲ್ಲಾ ಸಂಸ್ಥೆಗಳು ಸೇರಿ “ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ” ಯನ್ನು ಕಟ್ಟಿಕೊಂಡು ಮತ್ತಷ್ಟು ಸಂಘಟಿತರಾಗಿದ್ದೇವೆ. ನಾವು ನಮ್ಮವರಿಗಾಗಿ ಕೈ ಜೋಡಿಸುತ್ತಾ ಎಲ್ಲರನ್ನೂ ಒಂದೆಡೆ ಸೇರಲು ಮತ್ತು ಬೆಳೆಯಲು ಒಬ್ಬರಿಗೊಬ್ಬರು ಮೆಟ್ಟಿಲಾಗಲು ಹಾಗೂ ನಮ್ಮ ಸಂಸ್ಕೃತಿ ಪರಂಪರೆಯನ್ನು ಮುಂದುವರಿಸಲು “ಉತ್ತರ ಕರ್ನಾಟಕ ಉತ್ಸವ 23” ರನ್ನು ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಾಲ್ ಪ್ಯಾಲೇಸ್ (Palace sheesh Mahal) ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Advertisement
Advertisement
ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ ಪರಂಪರೆ, ಉಡುಗೆ ತೊಡುಗೆ ಆಹಾರ ಪದ್ಧತಿ ಎಲ್ಲವನ್ನು ಅನಾವರಣ ಗೊಳಿಸಲಾಗುವುದು. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟನೆ ಮಾಡುವರು. ಗದಗ ತೋಂಟದಾರ್ಯ ಮಠದ ತೋಂಟದ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ (Eshwara Khandre) ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Advertisement
ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಭಾಗದ ಜನರ ಸಾಂಸ್ಕೃತಿಕ ಕಾರ್ಯಕ್ರಗಳು ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರ್ಕಾರ 3.24 ಗುಂಟೆ ಜಮೀನು ಮಂಜೂರು ಮಾಡಿದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯವರಿಗೆ ಅಭಿನಂದನೆ ಸಲ್ಲಿಸಲು ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k