ಮುಂಬೈ: ನಟಿ ಮತ್ತು ಡ್ಯಾನ್ಸರ್ ನೋರಾ ಫತೇಹಿ (Nora Fatehi) ಅವರು ಡೇವಿಡ್ ಗುಟ್ಟಾ(David Guetta) ಅವರ ಸಂಗೀತ ಕಚೇರಿ ಸನ್‌ಬರ್ನ್ ಉತ್ಸವದಲ್ಲಿ (Sunburn Festival) ಭಾಗಿಯಾಗಲು ತೆರಳುತ್ತಿದ್ದಾಗ ರಸ್ತೆ ಅಪಘಾತಕ್ಕೀಡಾಗಿದ್ದರು. ಅಪಘಾತದ ಬಳಿಕ ಮೊದಲ ಅನುಭವ ಹಂಚಿಕೊಂಡಿದ್ದಾರೆ.
View this post on Instagram
ಕಣ್ಣೆದುರೆ ಸಾವು ರಪ್ಪನೆ ಬಂದು ಹೋಯ್ತು
ʻನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ, ಆದರೆ ಆ ಕ್ಷಣ ಅತ್ಯಂತ ಭಯಾನಕವಾಗಿತ್ತು. ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ನಮ್ಮ ಕಾರಿಗೆ ಡಿಕ್ಕಿ ಹೊಡೆದಾಗ ನಾನು ಕಾರಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಬಿದ್ದಿದ್ದೆ. ಕಿಟಕಿಗೆ ನನ್ನ ತಲೆ ಚಚ್ಚಿಕೊಂಡಿತ್ತು. ಆ ಕ್ಷಣದಲ್ಲಿ ನನ್ನ ಕಣ್ಣೆದುರೇ ಸಾವು ಬಂದು ಹೋದಂತಾಯಿತುʼ ಎಂದು ಆಸ್ಪತ್ರೆಯಲ್ಲಿರುವ ನಟಿ ನೋರಾ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೋರಾ ಫತೇಹಿ ಕಾರಿಗೆ ಡಿಕ್ಕಿ – ಅಪಾಯದಿಂದ ನಟಿ ಪಾರು
ನಾನು ಬದುಕಿರುವುದೇ ಅದೃಷ್ಟ. ಆದರೆ ಈ ಆಘಾತದಿಂದ ಹೊರಬರಲು ನನಗೆ ಸ್ವಲ್ಪ ಸಮಯಬೇಕು ಎಂದು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀವಲ್ಲಿ ಮದ್ವೇಲಿ ಪ್ರಭಾಸ್, ಪ್ರಿನ್ಸ್; ವೈರಲ್ ಹಿಂದಿನ ಅಸಲಿಯತ್ತೇನು?
ಏನಾಗಿತ್ತು?
ಸನ್‌ಬರ್ನ್ ಫೆಸ್ಟಿವಲ್‌ಗೆ ತೆರಳುತ್ತಿದ್ದ ದಾರಿಯಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿತ್ತು. ಎಣ್ಣೆ ಮತ್ತಿನಲ್ಲಿದ್ದ ಚಾಲಕನೊಬ್ಬ ಅವರ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಕಾರಿನ ಒಳಗಿದ್ದ ನೋರಾ ಅವರು ಕಿಟಕಿಗೆ ಹೋಗಿ ಬಡಿದಿದ್ದಾರೆ. ಘಟನೆಯ ನಂತರ ಅವರನ್ನ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಚಾಲಕ ಬಂಧನ
ಈಗಾಗಲೇ ಮುಂಬೈ ಪೊಲೀಸರು ಆರೋಪಿ ಚಾಲಕನನ್ನ ಬಂಧಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮತ್ತು ಅತಿ ವೇಗವಾಗಿ ವಾಹನ ಚಲಾಯಿಸಿದ ಪ್ರಕರಣಗಳನ್ನು ಆತನ ವಿರುದ್ಧ ದಾಖಲಿಸಲಾಗಿದೆ. ಇದನ್ನೂ ಓದಿ: ಕಾಫಿಪೋಸಾ ಆದೇಶ ಪ್ರಶ್ನಿಸಿದ್ದ ರನ್ಯಾಗೆ ಮತ್ತೆ ಶಾಕ್ – ಅರ್ಜಿ ವಜಾಗೊಳಿಸಿದ ಹೈಕೋರ್ಟ್


