ಮುಂಬೈ: ಬಾಲಿವುಡ್‍ನಲ್ಲಿ ದೊಡ್ಡ ದೊಡ್ಡ ಬ್ಯಾನರ್‍ನ ಸಿನಿಮಾಗಳು 2018ರಲ್ಲಿ ಬಿಡುಗಡೆಗೆ ಕ್ಯೂನಲ್ಲಿವೆ. ಆದ್ರೆ ಕೆಲವು ಹೆಸರಾಂತ ಬಾಲಿವುಡ್ ನಟ ನಟಿಯರ ಒಂದು ಸಿನಿಮಾವೂ ಕೂಡ ಈ ವರ್ಷ ರಿಲೀಸ್ ಆಗ್ತಿಲ್ಲ. ಒಂದು ಅವರಿಗೆ ಕಲಸ ಇಲ್ಲ ಅಥವಾ ಅವರ ಸಿನಿಮಾಗಳ ಬಿಡುಗಡೆ 2019ಕ್ಕೆ ಆಗಲಿದೆ.
ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್, ಬಿಪಾಶಾ ಬಸು ಸೇರಿದಂತೆ ಹಲವು ಸ್ಟಾರ್ ನಟಿಯರ ಕೈಯಲ್ಲೂ ಈ ವರ್ಷ ಯಾವುದೇ ಸಿನಿಮಾಗಳಿಲ್ಲ. ಪ್ರಿಯಾಂಕಾ ಚೋಪ್ರಾ ‘ನೆಕ್ಷ್ಟ್ ಸೂಪರ್‍ಸ್ಟಾರ್’ ಎಂಬ ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವಕಾಶಗಳಿಂದ ವಂಚಿತರಾಗಿರುವ ಆ 10 ಕಲಾವಿದರ ಪಟ್ಟಿ ಈ ಕೆಳಗಿನಂತಿದೆ.
Advertisement
1. ವಿದ್ಯಾ ಬಾಲನ್: 2005ರಲ್ಲಿ ‘ಪರಿಣೀತಾ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ವಿದ್ಯಾಗೆ ಆರಂಭದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಆದ್ರೆ ತಮ್ಮ ಮನೋಜ್ಞ ಅಭಿನಯದ ಮೂಲಕವೇ ತಮ್ಮನ್ನು ತಾವು ಗುರುತಿಸಿಕೊಂಡವರು ವಿದ್ಯಾಬಾಲನ್. 2011ರಲ್ಲಿ ತೆರೆಕಂಡ ‘ದಿ ಡರ್ಟಿ ಪಿಕ್ಚರ್’ ವಿದ್ಯಾ ಸಿನಿಕೆರಿಯರ್ ನಲ್ಲಿ ಬ್ರೇಕ್ ನೀಡಿದ ಸಿನಿಮಾ. 2017ರಲ್ಲಿ ತೆರೆಕಂಡ ‘ತುಮಾರಿ ಸುಲು’ ವಿದ್ಯಾ ಬಾಲನ್ ನಟನೆಯ ಕೊನೆಯ ಚಿತ್ರವಾಗಿದೆ.
Advertisement
Advertisement
2. ವಿವೇಕ್ ಓಬೇರಾಯ್: 2002ರಲ್ಲಿ ತೆರೆಕಂಡ ‘ಕಂಪನಿ’ ಚಿತ್ರದ ಮೂಲಕ ವಿವೇಕ್ ಓಬೇರಾಯ್ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ರೋಡ್, ಸಾಥಿಯಾ, ದಮ್, ಮಸ್ತಿ, ಕಾಲ್, ಕಿಸನಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಹೆಸರುವಾಸಿಯಾದ್ರು. ಕ್ರಿಶ್-3 ವಿವೇಕ್ ಓಬೇರಾಯ್ ಸಿನಿ ಜೀವನಕ್ಕೆ ಹೊಸ ತಿರುವು ನೀಡಿತು. 2017ರಲ್ಲಿ ತೆರೆಕಂಡ ಕಾಮಿಡಿ ಸಿನಿಮಾ ‘ಬ್ಯಾಂಕ್ ಚೋರ್’ ವಿವೇಕ್ ಅಭಿನಯದ ಕೊನೆಯ ಸಿನಿಮಾ.
Advertisement
3. ನಿಮ್ರತ್ ಕೌರ್: 2005ರಲ್ಲಿ ತೆರೆಕಂಡ ‘ಯಹಾ’ ನಿಮ್ರತ್ ಅಭಿನಯದ ಮೊದಲ ಚಿತ್ರ. ಒನ್ ನೈಟ್ ವಿಥ್ ದಿ ಕಿಂಗ್, ದಿ ಲಂಚ್ ಬಾಕ್ಸ್ ನಂತಹ ಯಶಸ್ವಿ ಚಿತ್ರಗಳಲ್ಲಿ ನಿಮ್ರತ್ ನಟಿಸಿದ್ದು, 2016ರಲ್ಲಿ ನಟಿಸಿದ ಏರ್‍ಲಿಫ್ಟ್ ಇವರ ಕೊನೆಯ ಫಿಲ್ಮ್.
4. ಆದಿತ್ಯಾ ರಾಯ್ ಕಪೂರ್: 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಆದಿತ್ಯಾ ಅಭಿನಯದ ಮೊದಲ ಸಿನಿಮಾ. ನಂತರ ಸಹನಟನಾಗಿ ಆ್ಯಕ್ಷನ್ ರಿಪ್ಲೈ ಮತ್ತು ಗುಝಾರಿಶ್ ಚಿತ್ರಗಳಿಗೆ ಬಣ್ಣ ಹಚ್ಚಿದರು. 2013ರಲ್ಲಿ ತೆರೆಕಂಡ ‘ಆಶೀಕಿ 2’ ಸಿನಿಮಾ ಆದಿತ್ಯಾಗೆ ಲವರ್ ಬಾಯ್ ಇಮೇಜ್ ತಂದುಕೊಟ್ಟಿತು. 2017ರಲ್ಲಿ ತೆರೆಕಂಡ ‘ಓಕೆ ಜಾನು’ ಕೊನೆಯ ಸಿನಿಮಾ.
5. ಆಥಿಯಾ ಶೆಟ್ಟಿ: ಸಲ್ಮಾನ್ ಖಾನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ಹೀರೋ’ ಚಿತ್ರದ ಮೂಲಕ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಸಿನಿರಂಗಕ್ಕೆ ಪರಿಚಿತವಾದ್ರು. 2017ರಲ್ಲಿ ತೆರೆಕಂಡ ಅಜೇಯ್ ದೇವಗನ್ ಮುಖ್ಯಭೂಮಿಕೆಯ ‘ಮುಬಾರಕಾಂ’ ಆಥಿಯಾ ಶೆಟ್ಟಿಯ ಕೊನೆಯ ಚಿತ್ರ.
6. ಶೃತಿ ಹಾಸನ್: ಲಕ್ಕಿ (2009) ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ರು. ತೆಲಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸರುವ ಶೃತಿಗೆ 2017ರಲ್ಲಿ ತೆರೆಕಂಡ ‘ಬೆಹನ್ ಹೋಗಿ ತೇರಿ’ ಬಾಲಿವುಡ್‍ನ ಕೊನೆಯ ಚಿತ್ರ. 2018ಕ್ಕೆ ಶೃತಿ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ ಅಂತಾ ಹೇಳಲಾಗುತ್ತಿದೆ.
7. ವಾಣಿ ಕಪೂರ್: ಶುದ್ಧ್ ದೇಸಿ ರೊಮ್ಯಾನ್ಸ್ (2013) ಚಿತ್ರದ ಮೂಲಕ ಸಹ ನಟಿಯಾಗಿ ಕಾಣಿಸಿಕೊಂಡ ವಾಣಿ ಕಪೂರ್‍ಗೆ ನಂತರ ಯಾವುದೇ ಚಿತ್ರದ ಅವಕಾಶಗಳು ಬರಲಿಲ್ಲ. 2016ರಲ್ಲಿ ತೆರೆಕಂಡ ‘ಬೇಫಿಕ್ರೆ’ ಸಿನಿಮಾ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡ ಮೊದಲ ಮತ್ತು ಕೊನೆಯ ಸಿನಿಮಾ.
8. ಕೊಂಕಣ ಸೇನ್ ಶರ್ಮಾ: ತಮ್ಮ ಮನೋಜ್ಞ ಅಭಿನಯದ ಮೂಲಕವೇ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ನಟಿ ಕೊಂಕಣ ಸೇನ್ ಶರ್ಮಾ. 2005ರಲ್ಲಿ ‘ಮಿಕ್ಸಡ್ ಡಬಲ್ಸ್’ ಚಿತ್ರದ ಮೂಲಕ ತಮ್ಮನ್ನು ತಾವು ಗುರತಿಸಿಕೊಂಡವರು. ಒಂದು ಮಗುವಿನ ತಾಯಿಯಾದ ಬಳಿಕವೂ ತಮ್ಮ ಗ್ಲಾಮರ್ ಉಳಿಸಿಕೊಂಡಿರುವ ಕೊಂಕಣ ಸೇನ್ ಶರ್ಮಾ ನಟಿಸಿರುವ 2017ರಲ್ಲಿ ತೆರಕಂಡ ‘ಲಿಪ್‍ಸ್ಟಿಕ್ ಅಂಡರ್ ಮೈ ಬುರ್ಕಾ’ ಕೊನೆಯ ಚಿತ್ರವಾಗಿದೆ.
9. ಬಿಪಾಶಾ ಬಸು: ಬಂಗಾಳಿ ಕೃಷ್ಣ ಸುಂದರಿ ಬಿಪಾಶಾ ಬಸು ಹಾರರ್ ಸಿನಿಮಾಗಳ ಮೂಲಕವೇ ತಮ್ಮನ್ನು ತಾವು ಪರಿಚಯಿಸಿಕೊಂಡ ನಟಿ. 2001ರಲ್ಲಿ ‘ಅಜನಬೀ’ ಮೊದಲ ಸಿನಿಮಾ ಮತ್ತು 2015ರಲ್ಲಿಯ ‘ಅಲೋನ್’ ಕೊನೆಯ ಫಿಲ್ಮ್. ಮದುವೆಯ ಬಳಿಕ ಬಿಪಾಶಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಅಂತಾ ಹೇಳಲಾಗುತ್ತಿದೆ.
10. ಪ್ರಿಯಾಂಕಾ ಚೋಪ್ರಾ: ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಕೂಡ ಈ ವರ್ಷ ಬಾಲಿವುಡ್ ಸಿನಿಮಾಗಳಿಂದ ವಂಚಿತರಾಗಿದ್ದಾರೆ. 2001ರ ‘ಅಜನಬಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ನೀಡಿದ ಪ್ರಿಯಾಂಕಾ, 2016ರಲ್ಲಿ ತೆರೆಕಂಡ ‘ಗಂಗಾಜಲ್’ ಹಿಂದಿಯ ಕೊನೆಯ ಸಿನಿಮಾವಾಗಿದೆ. ಆದರೂ ಹಾಲಿವುಡ್ ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳುತ್ತಿದ್ದಾರೆ.