ನವದೆಹಲಿ: ಕೊರೊನಾ ವೈರಸ್‍ನ ಲಾಕ್‍ಡೌನ್ ನಡುವೆ ಅಡುಗೆ ಅನಿಲ (ಎಲ್‍ಪಿಜಿ) ಗ್ರಾಹಕರಿಗೆ ಸಮಾಧಾನಕರ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮೇ 1ರಿಂದ ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್‌ನ ಬೆಲೆಯನ್ನು 162 ರೂ.ಗೆ ಇಳಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ ಹೊಸ ದರವು ಇಂದಿನಿಂದ ಜಾರಿಗೆ ಬಂದಿದೆ.
ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 162.50 ರೂ. ಕಡಿಮೆ ಮಾಡಲಾಗಿದೆ. ಹೀಗಾಗಿ ಇಂದಿನಿಂದ ಒಂದು ಸಿಲಿಂಡರ್‍ಗೆ 581.50 ರೂ. ನೀಡಿ ಗ್ರಾಹಕರು ಖರೀಸಬಹುದಾಗಿದೆ. ಹೊಸ ದರದ ಪ್ರಕಾರ ಸಬ್ಸಿಡಿ ರಹಿತ ಸಿಲಿಂಡರ್‌ಗೆ ಮುಂಬೈನಲ್ಲಿ 579 ರೂ., ಕೋಲ್ಕತ್ತಾದಲ್ಲಿ 584.50 ರೂ., ಮತ್ತು ಚೆನ್ನೈನಲ್ಲಿ 569.50 ರೂ. ಪಾವತಿಸಬೇಕಾಗುತ್ತದೆ.
Advertisement
Advertisement
ಬೆಂಗಳೂರಿನಲ್ಲಿ ಮಾರ್ಚ್ ವೇಳೆಗೆ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯು 809 ರೂ. ಇತ್ತು. ನಂತರ ಏಪ್ರಿಲ್‍ನಲ್ಲಿ ಬೆಲೆ ಇಳಿಕೆಯಿಂದಾಗಿ 747 ರೂ. ಇತ್ತು. ಆದರೆ ಮೇ 1ರಿಂದ ಸಬ್ಸಿಡಿ ರಹಿತ ಸಿಲಿಂಡರ್ ಗ್ರಾಹಕರು 585 ರೂ. ಪಾವತಿಸಬೇಕಾಗುತ್ತದೆ.
Advertisement
ಸರ್ಕಾರವು ಆರ್ಥಿಕ ವರ್ಷದಲ್ಲಿ ಎಲ್‍ಪಿಜಿ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ 12 ಸಿಲಿಂಡರ್‌ಗಳನ್ನು ನೀಡುತ್ತದೆ. ಅದಕ್ಕಿಂತ ಹೆಚ್ಚಿನ ಬೇಡಿಕೆ ಹೊಂದಿದ್ದರೆ ಮಾರುಕಟ್ಟೆಯ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಈ ವರ್ಷದಲ್ಲಿ ಸತತ ನಾಲ್ಕನೇ ತಿಂಗಳಿಂದ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆಯನ್ನು ಕಡಿಮೆ ಮಾಡಲಾಗಿದೆ.
Advertisement
ಎಲ್‍ಪಿಜಿಯನ್ನು ಹೊರತುಪಡಿಸಿ ವಾಣಿಜ್ಯ ಅನಿಲದ ಬೆಲೆಯಲ್ಲಿ ಪ್ರಮುಖ ಕಡಿತಗಳಾಗಿವೆ. ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ 256 ರೂ.ಗೆ ಇಳಿಕೆಯಾಗಿದೆ. ಮೇ 1ರಿಂದ ವಾಣಿಜ್ಯ ಸಿಲಿಂಡರ್ ಬೆಲೆಯು 1,029.50 ರೂ.ಗೆ ಇಳಿಕೆಯಾಗಿದೆ. ಅದೇ ರೀತಿ ವಾಣಿಜ್ಯ ಅನಿಲ ಸಿಲಿಂಡರ್‍ಗಳು ಕೋಲ್ಕತ್ತಾದಲ್ಲಿ 1,086.00 ರೂ., ಮುಂಬೈನಲ್ಲಿ 978 ರೂ. ಮತ್ತು ಚೆನ್ನೈನಲ್ಲಿ 1,144.50 ರೂ. ನಿಗಧಿಯಾಗಿದೆ.