ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಜನಜೀವನ ಅಸ್ತವ್ಯಸ್ಥ

Public TV
1 Min Read
Heavy snowfall 2

ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಬುಡಕಟ್ಟು ಜಿಲ್ಲೆಗಳಾದ ಲಹೌಲ್, ಸ್ಪಿತಿ, ಚಂಬಲ್ ಮತ್ತು ಮಂಡಿ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಹಿಮಪಾತದ (Heavy snowfall) ಜೊತೆಗೆ ಮಳೆಯಾಗುತ್ತಿದ್ದು, ಈ ನಡುವೆ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

Heavy snowfall 1

ಮೂರು ದಿನಗಳ ನಂತರವೂ ಲಾಹೌಲ್-ಸ್ಪಿಟಿಯಲ್ಲಿ ಹಿಮಪಾತ ಮುಂದುವರೆದಿದೆ. ಹಲವಾರು ಪ್ರದೇಶಗಳಲ್ಲಿ ಮೂರು ಅಡಿಗೂ ಹೆಚ್ಚು ಹಿಮ ಸಂಗ್ರಹವಾಗಿದ್ದು, ಭಾರೀ ಹಿಮಪಾತದ ಅಪಾಯವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 50 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ

ಮತ್ತೊಂದೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಲ್ಲು ಜಿಲ್ಲೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಭೂತ್‌ನಾಥ್ ನಾಲಾ ಪ್ರದೇಶದಲ್ಲಿ ಹಲವಾರು ವಾಹನಗಳು ಕೊಚ್ಚಿ ಹೋಗಿವೆ. ಗಾಂಧಿನಗರದಲ್ಲಿ ಅವಶೇಷಗಳ ಅಡಿಯಲ್ಲಿ ವಾಹನಗಳು ಸಿಲುಕಿವೆ. ಹಿಮಾಚಲ ಪ್ರದೇಶದ ಹವಾಮಾನ ಇಲಾಖೆಯು ಅರೆಂಜ್ ಅಲರ್ಟ್ ನೀಡಿದೆ. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ವಂಚನೆ ಕೇಸ್‌ – ಸ್ಟಾರ್‌ ನಟಿಯರಾದ ತಮನ್ನಾ, ಕಾಜಲ್‌ ಅಗರ್ವಾಲ್‌ಗೆ ಸಂಕಷ್ಟ

ನಿರಂತರವಾದ ಭಾರೀ ಹಿಮಪಾತವನ್ನು ಪರಿಗಣಿಸಿ, ಜಿಲ್ಲಾಡಳಿತವು ಶುಕ್ರವಾರ ಲಹೌಲ್-ಸ್ಪಿಟಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚಿಸಿದೆ. ಮಂಡಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಬಸ್‌ವೊಂದು ಅಪಘಾತಕ್ಕೀಡಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ, ಅಧಿಕಾರಿಗಳು ರಸ್ತೆ ತೆರವು ಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಚಲಿಸುತ್ತಿದ್ದ ಬೈಕ್‌ನಲ್ಲಿ ಪ್ರೇಯಸಿ ಜೊತೆ ರೊಮ್ಯಾನ್ಸ್ – ರೋಡ್‌ ರೋಮಿಯೋ ಅರೆಸ್ಟ್‌!

Share This Article