ಮಡಿಕೇರಿ: ಸರಿಯಾಗಿ ವೇತನ (Salary) ಪಾವತಿಯಾಗದ್ದಕ್ಕೆ ಕರ್ತವ್ಯ ಸ್ಥಗಿತಗೊಳಿಸಿ ಕೆಎಸ್‌ಆರ್‌ಟಿಸಿಯ (KSRTC) 48 ಹೊರಗುತ್ತಿಗೆ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮಡಿಕೇರಿಯಲ್ಲಿ ಇಂದು(ಸೆ.14) ಬೆಳಿಗ್ಗೆ ನಡೆದಿದೆ.
ಸರಿಯಾದ ವೇತನ ಸಿಗದಕ್ಕೆ ಇರುವುದರಿಂದ ಇಂದು ಬೆಳಿಗ್ಗೆಯಿಂದಲೇ ಬಸ್ಸುಗಳನ್ನು ರಸ್ತೆಗೆ ಇಳಿಸದೇ ಪ್ರತಿಭಟನೆ ನಡೆಸುತ್ತಿದ್ದು ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಬಂದ್ ಆಗಿದೆ.
ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಬಸ್ಸು ಚಾಲಕರು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಇದ್ದ ಏಜೆನ್ಸಿ ಪ್ರತಿ ತಿಂಗಳು 23 ಸಾವಿರ ರೂ. ಸಂಬಳ ನೀಡುತ್ತಿತ್ತು. ಆದರೆ ಈ ಏಜೆನ್ಸಿ ಬದಲಾಗಿದ್ದು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ 13, 14 ಸಾವಿರ ರೂ. ಪಾವತಿಸುತ್ತಿದೆ. ಹಲವು ದಿನಗಳ ಬಳಿಕ ಒತ್ತಾಯದ ಬಳಿಕ ಶುಕ್ರವಾರ ಅರ್ಧ ಸಂಬಳ ಪಾವತಿಸಿದ್ದಾರೆ. ಇದನ್ನೂ ಓದಿ: ಹಾಸನ| ಅನಾರೋಗ್ಯದಿಂದ ಸಿಆರ್‌ಪಿಎಫ್ ಯೋಧ ಸಾವು – ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ ಎಂದ ಕುಟುಂಬ
ಸಿಎಲ್ ರಜೆ ಕೊಡದ ಏಜೆನ್ಸಿ ಯಾವುದೇ ಅಪಘಾತವಾದರೂ ಚಾಲಕರನ್ನೇ ಹೊಣೆ ಮಾಡುತ್ತಿದೆ. ಏಜೆನ್ಸಿ ಪೂರ್ಣ ಪ್ರಮಾಣದ ವೇತನ ಹಾಕುವವರೆಗೂ ಬಸ್ಸು ಸಂಚಾರ ಅರಂಭ ಮಾಡುವುದಿಲ್ಲ ಎಂದು 48 ಬಸ್ಸು ಚಾಲಕರು ಪಟ್ಟು ಹಿಡಿದ್ದಾರೆ.
ದಿಢೀರ್ ಪ್ರತಿಭಟನೆಯಿಂದ ಕೊಡಗು ಜಿಲ್ಲೆಯ ಹಲವಾರು ಮಾರ್ಗಗಳಲ್ಲಿ ಸರ್ಕಾರಿ ಬಸ್ಸು ಸಂಚಾರ ಅಗದೇ ವ್ಯತ್ಯಯಗೊಂಡಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಇಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೆಬ್ಬಾವಿನ ಮರಿ ಎಂದು ಬರಿಗೈಯಲ್ಲಿ ಹಾವು ಹಿಡಿದ ವ್ಯಕ್ತಿ ಸಾವು
ಈ ವಿಚಾರದ ಬಗ್ಗೆ ಮಡಿಕೇರಿ ಡೀಪೋ ಮ್ಯಾನೇಜರ್ ಅಗಿರುವ ಮೆಹಬೂಬ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದೆ. ಇದೆ ಮೊದಲ ಬಾರಿಗೆ ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿಯಿಂದ ವೇತನ ಹಾಕುವುದರಲ್ಲಿ ಕೊಂಚ ಗೊಂದಲವಾಗಿದೆ. ಕೆಲ ಚಾಲಕರು ಏಜೆನ್ಸಿ ಅವರಿಗೆ ಬ್ಯಾಂಕ್ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಕೊಟ್ಟಿಲ್ಲ. ಹೀಗಾಗಿ ಸ್ವಲ್ಪ ವೇತನ ಹಾಕಿದ್ದಾರೆ. ಅದನ್ನು ಸರಿಪಡಿಸುವ ಕೆಲಸ ಅಗುತ್ತಿದೆ. 30 ರೂಟ್‌ಗಳಲ್ಲಿ ಬಸ್ ಇಳಿಸಿದ್ದೇವೆ. ಶಾಲಾ ಮಕ್ಕಳಿಗೆ, ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಕರ್ತವ್ಯಕ್ಕೆ ಹಾಜರಾಗಿ ಎಂದು ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.