ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಪಂಚಾಯತ್ ಚುನಾವಣೆಯಲ್ಲಿ (Panchayat Election) ಸಂಘರ್ಷ ಮುಂದುವರಿದಿದ್ದು ಪಕ್ಷೇತರ ಅಭ್ಯರ್ಥಿಯೊಬ್ಬರ ಮಗಳ ಹಣೆಗೆ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಾರಕೇಶ್ವರ (Tarakeshwar) ಎಂಬಲ್ಲಿ ಘಟನೆ ನಡೆದಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
20 ವರ್ಷದ ಚಂದನಾ ಸಿಂಗ್ ಹತ್ಯೆಯಾದ ಯುವತಿಯಾಗಿದ್ದು, ಮೃತದೇಹವನ್ನು ಕೋಲ್ಕತ್ತಾ (Kolkata) ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಮಾಹಿತಿಗಳ ಪ್ರಕಾರ ಪಕ್ಷೇತರ ಅಭ್ಯರ್ಥಿ ಪಿಂಟು ಸಿಂಗ್ ಮನೆ ಮೇಲೆ ದಾಳಿ ಮಾಡಿದ ಗುಂಪೊಂದು ಅವರ ಕುಟುಂಬದ ಸದಸ್ಯರನ್ನು ಥಳಿಸಿದ್ದಾರೆ. ಬಳಿಕ ಯುವತಿಯನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕೆಜಿ ಟೊಮೆಟೊಗೆ 200 ರೂ., ಮೆಣಸಿನಕಾಯಿಗೆ 170 ರೂ. – ತರಕಾರಿಗಳ ಬೆಲೆ ಭಾರೀ ದುಬಾರಿ!
ಘಟನಾ ಸ್ಥಳದಿಂದ ಗುಂಡುಗಳು ಮತ್ತು ಬಾಂಬ್‌ಗಳ ಶೆಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ, ಪೊಲೀಸರು ಸ್ಥಳದಿಂದ ಬುಲೆಟ್‌ಗಳು ಮತ್ತು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲು ಯಾವುದೇ ತ್ವರಿತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದನ್ನೂ ಓದಿ: ರೈಲ್ವೇ ಬ್ರಿಡ್ಜ್ ನಟ್ ಕಳಚಿದ ಕಿಡಿಗೇಡಿಗಳು – ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಆಡಳಿತಾರೂಢ ಟಿಎಂಸಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಿಂಟು ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ (Independent Candidate) ಸ್ಪರ್ಧೆ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆ ಅವರನ್ನು ಗುರಿಯಾಗಿಸಿ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಈ ಆರೋಪವನ್ನು ಟಿಎಂಸಿ ಕಾರ್ಯಕರ್ತರು ನಿರಾಕರಿಸಿದ್ದಾರೆ. ಹಲ್ಲೆಗೂ ನಮಗೂ ಸಂಬಂಧ ಇಲ್ಲ ಎಂದು ಸ್ಥಳೀಯ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: West Bengal Violence: ಭುಗಿಲೆದ್ದ ಹಿಂಸಾಚಾರಕ್ಕೆ 11 ಮಂದಿ ಬಲಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]