ಮತ್ತೆ ಬಿಡುಗಡೆಯಾಗಲಿದೆ ನೋಕಿಯಾದ ಶಕ್ತಿಶಾಲಿ ಫೀಚರ್ ಫೋನ್

Public TV
1 Min Read
nokia 3310

ನವದೆಹಲಿ: ಈಗ ಸ್ಮಾರ್ಟ್ ಫೋನ್‍ಗಳದ್ದೇ ಅಬ್ಬರ. ಆದರೆ ನೋಕಿಯಾ ಕಂಪೆನಿ ಈಗ ಸ್ಮಾರ್ಟ್ ಫೋನಿನ ಜೊತೆಗೆ ಫೀಚರ್ ಫೋನ್ ಸಮಯದಲ್ಲಿ ವಿಶ್ವದಲ್ಲೇ ಹವಾ ಸೃಷ್ಟಿಸಿದ್ದ 3310 ಫೋನನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಮುಂದಾಗುತ್ತಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ನೋಕಿಯಾ  ಫೆ.27 ರಿಂದ ಮಾರ್ಚ್ 2ರವರೆಗೆ ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‍ನಲ್ಲಿ ಈ 3310 ಫೋನನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

59 ಯುರೋ (ಅಂದಾಜು 4 ಸಾವಿರ ರೂ.) ಬೆಲೆಯಲ್ಲಿ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

2000 ಇಸ್ವಿಯ ಸೆಪ್ಟೆಂಬರ್ 1ರಂದು ಈ ಫೋನ್ ಬಿಡುಗಡೆಯಾಗಿದ್ದು, ವಿಶ್ವದಲ್ಲಿ 12.6 ಕೋಟಿ ಫೋನ್‍ಗಳು ಮಾರಾಟ ಕಂಡಿತ್ತು. ಈ ಮೂಲಕ ವಿಶ್ವದ ಶ್ರೇಷ್ಟ ಫೀಚರ್ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

1000 ಎಂಎಎಚ್ ಬ್ಯಾಟರಿ, ಸ್ನೇಕ್ ಆಟ, ವೆಲ್‍ಕಂ ಸ್ಕ್ರೀನ್ ಅಲ್ಲದೇ ಈ ಫೋನ್ ದೇಹ(ಬಾಡಿ) ಬಹಳ ಗಟ್ಟಿಯಾಗಿತ್ತು. ಮೇಲಿನಿಂದ ಬಿದ್ದರೂ ಫೋನಿನ ಒಳಗಡೆ ಭಾಗಕ್ಕೆ ಯಾವುದೇ ಹಾನಿ ಆಗುತ್ತಿರಲಿಲ್ಲ. ಹೀಗಾಗಿ ನೋಕಿಯಾ 3310ನ್ನು ಶಕ್ತಿಶಾಲಿ ಫೋನ್ ಎಂದು ಜನ ಕರೆಯುತ್ತಿದ್ದರು.

Share This Article