ನೋಕಿಯಾದ 2 ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

Public TV
2 Min Read
Nokia 7

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಂಪನಿಗಳು ಫೋನ್ ಬೆಲೆಗಳನ್ನು ಇಳಿಸಿದ ಬೆನ್ನಲ್ಲೇ ನೋಕಿಯಾ ಕಂಪನಿ ತನ್ನ ಎರಡು ಡ್ಯುಯಲ್ ಸಿಮ್ ಫೋನ್ ಗಳ ಬೆಲೆಯನ್ನು ಇಳಿಸಿದೆ.

ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡುತ್ತಿರುವ ಎಚ್‍ಎಂಡಿ ಗ್ಲೋಬಲ್ ಈ ವಿಚಾರವನ್ನು ತಿಳಿಸಿದೆ. ನೋಕಿಯಾ 6.2 ಕಳೆದ ಅಕ್ಟೋಬರ್ ತಿಂಗಳಿನಲ್ಲಿ 15,999 ರೂ. ನಲ್ಲಿ ಬಿಡುಗಡೆಯಾಗಿತ್ತು. ಈಗ 3,500 ರೂ. ಕಡಿಮೆಯಾಗಿದ್ದು 12,499 ರೂ.ಗೆ ಲಭ್ಯವಿದೆ.

nokia 6

ನೋಕಿಯಾ 7.2 ಕಳೆದ ಸೆಪ್ಟೆಂಬರ್ ನಲ್ಲಿ 18,599 ರೂ.ಗೆ ಬಿಡುಗಡೆಯಗಿದ್ದು, ಈಗ 4ಜಿಬಿ ರ‍್ಯಾಮ್,+ 64 ಜಿಬಿ ಆಂತರಿಕ ಮಮೊರಿಯ ಫೋನ್ ಬೆಲೆ 3,100 ರೂ. ಕಡಿಮೆ ಆಗಿದ್ದು, 15,499 ರೂ. ಬೆಲೆಯಲ್ಲಿ ಲಭ್ಯವಿದೆ. 6ಜಿಬಿ ರ‍್ಯಾಮ್,+ 128 ಜಿಬಿ ಆಂತರಿಕ ಮೆಮೊರಿಯ ಫೋನ್ ಬೆಲೆ 2,500 ರೂ. ಇಳಿಕೆಯಾಗಿದ್ದು 17,099 ರೂ. ಬೆಲೆಯಲ್ಲಿ ಲಭ್ಯವಿದೆ.

ನೋಕಿಯಾ 6.2 ಫೋನ್ ಅಮೆಜಾನ್ ಮತ್ತು ನೋಕಿಯಾ ಇಂಡಿಯಾ ಆನ್‍ಲೈನ್ ಸ್ಟೋರ್ ನಲ್ಲಿ ಲಭ್ಯವಿದ್ದರೆ ನೋಕಿಯಾ 7.2 ಫ್ಲಿಪ್ ಕಾರ್ಟ್ ಮತ್ತು ನೋಕಿಯಾ ಇಂಡಿಯಾ ಆನ್‍ಲೈನ್ ಸ್ಟೋರ್ ನಲ್ಲಿ  ಲಭ್ಯವಿದೆ.

nokia 6 7

ಎರಡು ಫೋನ್‍ಗಳು ಆಂಡ್ರಾಯ್ಡ್ ಪೈ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಗೂಗಲ್ ಆಂಡ್ರಾಯ್ಡ್ ಓನ್ ಕಾರ್ಯಯೋಜನೆಯ ಅಡಿಯಲ್ಲಿ ತಯಾರಾಗಿದ್ದು ಸ್ಟಾಕ್ ಆಂಡ್ರಾಯ್ಡ್ ಹೊಂದಿದೆ. ಹೀಗಾಗಿ ಬೇಗನೇ ಆಂಡ್ರಾಯ್ಡ್ ಅಪ್‍ಡೇಟ್ ಸಿಗುತ್ತದೆ.

ನೋಕಿಯಾ 6.2 ಗುಣವೈಶಿಷ್ಟ್ಯಗಳು:
ಡ್ಯುಯಲ್ ಸಿಮ್, 6.3 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಸ್ಕ್ರೀನ್(1080*2280 ಪಿಕ್ಸೆಲ್, 400 ಪಿಪಿಐ), ಆಂಡ್ರಾಯ್ಡ್ ಪೈ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ 636 ಅಕ್ಟಾಕೋರ್ ಪ್ರೊಸೆಸರ್ ಪ್ರೊಸೆಸರ್ 64 ಜಿಬಿ ಆಂತರಿಕ ಮೆಮೊರಿ/4ಜಿಬಿ ರ‍್ಯಾಮ್, ಟ್ರಿಪಲ್ ಕ್ಯಾಮೆರಾ(16 ಎಂಪಿ, 8 ಎಂಪಿ, 5 ಎಂಪಿ) ಮುಂದುಗಡೆ 8 ಎಂಪಿ ಕ್ಯಾಮರಾ, ತೆಗೆಯಲು ಅಸಾಧ್ಯವಾದ 3500 ಎಂಎಎಚ್ ಲಿ-ಪೊ ಬ್ಯಾಟರಿ

Nokia72 ice

ನೋಕಿಯಾ 7.2 ಗುಣವೈಶಿಷ್ಟ್ಯಗಳು:
ಡ್ಯುಯಲ್ ಸಿಮ್, 6.3 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2280 ಪಿಕ್ಸೆಲ್, 400 ಪಿಪಿಐ), ಆಂಡ್ರಾಯ್ಡ್ ಪೈ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ 660 ಅಕ್ಟಾ ಕೋರ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ/ 4 ಜಿಬಿ ರ‍್ಯಾಮ್,, 128 ಜಿಬಿ ಆಂತರಿಕ ಮೆಮೊರಿ/ 6ಜಿಬಿ ರ‍್ಯಾಮ್, ಟ್ರಿಪ್ಪಲ್ ಕ್ಯಾಮೆರಾ(48 ಎಂಪಿ, 8 ಎಂಪಿ, 5 ಎಂಪಿ), ಮುಂದುಗಡೆ 20 ಎಂಪಿ ಕ್ಯಾಮೆರಾ, ತೆಗೆಯಲು ಅಸಾಧ್ಯವಾದ 3500 ಎಂಎಎಚ್ ಲಿ-ಪೊ ಬ್ಯಾಟರಿ.

Share This Article
Leave a Comment

Leave a Reply

Your email address will not be published. Required fields are marked *