ನವದೆಹಲಿ: ಭಾರತದ ಮಾರುಕಟ್ಟೆಗೆ ನೋಕಿಯಾದ ಮೂರು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನುಗಳು ಬಿಡುಗಡೆಯಾಗಿದೆ.
ಫಿನ್ಲೆಂಡ್ ಮೂಲದ ಎಚ್‍ಎಂಡಿ ಗ್ಲೋಬಲ್ ಕಂಪೆನಿ ನೋಕಿಯಾದ ಮೂರು ಫೋನ್‍ಗಳಾದ ನೋಕಿಯಾ 3, ನೋಕಿಯಾ 5, ನೋಕಿಯಾ 6 ಫೋನ್ ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾ 3 ಮತ್ತು ನೋಕಿಯಾ 5 ಆಫ್‍ಲೈನ್ ಸ್ಟೋರ್ ನಲ್ಲಿ ಸಿಗಲಿದ್ದರೆ ನೋಕಿಯಾ 6 ಅಮೇಜಾನ್ ತಾಣದಲ್ಲಿ ಮಾತ್ರ ಸಿಗಲಿದೆ.
Advertisement
ಯಾವುದಕ್ಕೆ ಎಷ್ಟು ರೂ.?
ನೋಕಿಯಾ 6 ಫೋನಿಗೆ 14,999 ರೂ. ನಿಗದಿ ಪಡಿಸಲಾಗಿದೆ. ಜುಲೈ 14ರಿಂದ ಆನ್‍ಲೈನ್ ನೊಂದಣಿ ಆರಂಭವಾಗಲಿದ್ದು, ಮಾರಾಟ ಯಾವ ದಿನಾಂಕ ನಡೆಯಲಿದೆ ಎನ್ನುವುದನ್ನು ತಿಳಿಸಿಲ್ಲ.
Advertisement
ನೋಕಿಯಾ 5 ಫೋನಿಗೆ 12,899 ರೂ. ನಿಗದಿ ಮಾಡಿದ್ದು, ಜುಲೈ 17ರಿಂದ ಆಫ್‍ಲೈನ್ ಸ್ಟೋರ್‍ಗಳಲ್ಲಿ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ಬೆಂಗಳೂರು, ದೆಹಲಿ ಎನ್‍ಸಿಆರ್, ಮುಂಬೈ, ಚೆನ್ನೈ, ಚಂಡೀಗಢ, ಜೈಪುರ, ಕೋಲ್ಕತ್ತಾ, ಲಕ್ನೋ, ಇಂದೋರ್, ಹೈದರಾಬಾದ್, ಪುಣೆ, ಅಹಮದಾಬಾದ್ ಮತ್ತು ಕ್ಯಾಲಿಕಟ್ ನಗರದಲ್ಲಿನ ರಿಟೇಲ್ ಸ್ಟೋರ್‍ಗಳಲ್ಲಿ ಪ್ರೀ ಬುಕ್ಕಿಂಗ್ ಮಾಡಬಹುದಾಗಿದೆ.
Advertisement
ನೋಕಿಯಾ 3 ಫೋನಿಗೆ 9,499 ರೂ. ನಿಗದಿ ಮಾಡಿದ್ದು, ಜೂನ್ 16ರಿಂದ ಆಫ್‍ಲೈನ್ ಸ್ಟೋರ್‍ಗಳಲ್ಲಿ ಮಾತ್ರ ಸಿಗಲಿದೆ. ಈ ಫೋನಿಗೆ ಮುಂಗಡವಾಗಿ ಬುಕ್ಕಿಂಗ್ ಮಾಡಬೇಕಾಗಿಲ್ಲ. ಈ ಮೂರು ಫೋನ್‍ಗಳು ಎಲ್‍ಟಿಟಿ ಟೆಕ್ನಾಲಜಿ ಸಪೋರ್ಟ್ ಮಾಡುವ ಕಾರಣ ಜಿಯೋ ಸಿಮ್ ಹಾಕಬಹುದಾಗಿದೆ.
Advertisement
ನೋಕಿಯಾ 6:
ಡ್ಯುಯಲ್ ಸಿಮ್, 169 ಗ್ರಾಂ ತೂಕ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(1080*1920 ಪಿಕ್ಸೆಲ್, 403 ಪಿಪಿಐ), ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3, ಆಂಡ್ರಾಯ್ಡ್ 7.1.1 ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ ಅಕ್ಟಾಕೋರ್ ಪ್ರೊಸೆಸರ್, 32 ಜಿಬಿ ಆಂತರಿಕ ಮೆಮೊರಿ, 3ಜಿಬಿ ರಾಮ್, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 3000 ಎಂಎಎಚ್ ಬ್ಯಾಟರಿ, ಹಿಂದುಗಡೆ 16 ಎಂಪಿ, ಮುಂದುಗಡೆ 8 ಎಂಪಿ ಕ್ಯಾಮೆರಾ, ಫಿಂಗರ್‍ಪ್ರಿಂಟ್ ಸೆನ್ಸರ್ ಹೊಂದಿದೆ. ಬೆಲೆ: 14,999 ರೂ.
ನೋಕಿಯಾ 5:
ಸಿಂಗಲ್ ಸಿಮ್, 5.2 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(720*1280 ಪಿಕ್ಸೆಲ್, 282 ಪಿಪಿಐ) ಕಾರ್ನಿಂಗ್ ಗೊರಿಲ್ಲ ಗ್ಲಾಸ್, ಆಂಡ್ರಾಯ್ಡ್ 7.1.1 ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ ಅಕ್ಟಾಕೋರ್ ಪ್ರೊಸೆಸರ್, 16ಜಿಬಿ ಆಂತರಿಕ ಮೆಮೊರಿ, 2ಜಿಬಿ ರಾಮ್, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 13 ಎಂಪಿ ಹಿಂದುಗಡೆ, 8 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, 3000 ಎಂಎಎಚ್ ಬ್ಯಾಟರಿ ಹೊಂದಿದೆ. ಬೆಲೆ: 12,899 ರೂ.
ನೋಕಿಯಾ 3:
ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಸ್ಕ್ರೀನ್(720*1280 ಪಿಕ್ಸೆಲ್, 294 ಪಿಪಿಐ), ಆಂಡ್ರಾಯ್ಡ್ 7.0 ನೂಗಟ್ ಓಎಸ್, ಮೀಡಿಯಾ ಟೆಕ್ ಕ್ವಾಡ್ ಕೋರ್ ಪ್ರೊಸೆಸರ್, 16 ಜಿಬಿ ಆಂತರಿಕ ಮೆಮೊರಿ, 2 ಜಿಬಿ ರಾಮ್, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 8 ಎಂಪಿ ಹಿಂದುಗಡೆ ಮತ್ತು ಮುಂದುಗಡೆ ಕ್ಯಾಮೆರಾ, 2650 ಎಂಎಎಚ್ ಬ್ಯಾಟರಿ ಹೊಂದಿದೆ. ಬೆಲೆ 9,499 ರೂ.
ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ನೋಕಿಯಾ 3310 ಫೀಚರ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?