ಏ.4 ರಂದು ರಾತ್ರಿ ಗ್ರೇಟರ್ ನೋಯ್ಡಾ ವೆಸ್ಟ್‌ನ ಸೆಕ್ಟರ್ 1ರ ಅರಿಹಂತ್ ಆರ್ಡೆನ್ ನಿವಾಸಿ ಛಾಯಾ ಶರ್ಮಾ ಎಂಬವರು ಆನ್‌ಲೈನ್‌ನಲ್ಲಿ ವೆಜ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು. ಆದರೆ ಅವರ ಆರ್ಡರ್‌ನಲ್ಲಿ ನಾನ್ ವೆಜ್ ಬಿರಿಯಾನಿ ಬಂದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಉಗ್ರ ಕಸಬ್‌ಗೆ ಬಿರಿಯಾನಿ ತಿನ್ನಿಸಿದ್ದನ್ನ ಮರೆತಿಲ್ಲ – ಕಾಂಗ್ರೆಸ್ ವಿರುದ್ಧ ಪಿಯೂಷ್ ಗೋಯಲ್ ವಾಗ್ದಾಳಿ
ಈ ಕುರಿತು ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ತನಗಾಗಿರುವ ಅನುಭವವನ್ನು ತಿಳಿಸಿದ್ದಾರೆ. ನಾನು ಶುದ್ಧ ಸಸ್ಯಾಹಾರಿ ಹಾಗೂ ಇದು ನವರಾತ್ರಿಯ ಸಮಯವಾಗಿದ್ದರಿಂದ ನಾನು ವೆಜ್ ಬಿರಿಯಾನಿ ಆರ್ಡರ್ ಮಾಡಿದೆ. ಆರ್ಡರ್ ಬಂದ ತಕ್ಷಣ ನಾನು ಸ್ವಲ್ಪ ಬಿರಿಯಾನಿಯನ್ನು ತಿಂದೆ. ಬಳಿಕ ತಿನ್ನುವಾಗ ರುಚಿಯಲ್ಲಿ ಏನೋ ಬದಲಾದ ಹಾಗೇ ಅನಿಸಿತು. ಬಿರಿಯಾನಿಯ ಒಳಗೆ ಕೋಳಿ ಮಾಂಸ ಹಾಗೂ ಕೆಲವು ತುಂಡುಗಳಿರುವುದು ಕಾಣಿಸಿದ್ದು, ತಕ್ಷಣವೇ ನಾನು ಹೊರಗೆಸೆದೆ. ಇಲ್ಲಿಯವರೆಗೆ ನಾನು ಮಾಂಸಾಹಾರ ಸೇವಿಸಿಲ್ಲ. ಇದು ನಿಜವಾಗಿಯೂ ನನಗೆ ಕೆಟ್ಟ ಅನುಭವವೆಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
- Advertisement3
ಈ ಕುರಿತು ಸೆಂಟ್ರಲ್ ನೋಯ್ಡಾ ಪೊಲೀಸ್ ಉಪ ಆಯುಕ್ತ ಶಕ್ತಿ ಅವಸ್ಥಿ ಮಾತನಾಡಿ, ಯುವತಿ ಆರ್ಡರ್‌ನಲ್ಲಿ ನಾನ್ ವೆಜ್ ಬಿರಿಯಾನಿ ಬಂದಿರುವುದನ್ನು ನೋಡಿದ ಬಳಿಕ ತಕ್ಷಣ ರೆಸ್ಟೋರೆಂಟ್‌ಗೆ ಕರೆ ಮಾಡಲು ಪ್ರಯತ್ನಿಸಿದ್ದು, ಆದರೆ ಯಾರೂ ಉತ್ತರಿಸಿಲ್ಲ. ರೆಸ್ಟೋರೆಂಟ್ ಮುಚ್ಚಿರಬೇಕೆಂದು ತಿಳಿದು ಸುಮ್ಮನಾಗುತ್ತಾರೆ. ಬಳಿಕ ಅವರು ವಿಡಿಯೋ ಹಂಚಿಕೊಂಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಯುವತಿ ರೆಸ್ಟೋರೆಂಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದು, ಇಕೋವಿಲೇಜ್-1ರ ನಿವಾಸಿ ರಾಹುಲ್ ರಾಜವಂಶಿ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
- Advertisement
ರೆಸ್ಟೋರೆಂಟ್ ಮಾಲೀಕನ ವಿರುದ್ಧ ಬಿಎನ್‌ಎಸ್ ಸೆಕ್ಷನ್ 271 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜೊತೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಧಿಕಾರಿಗಳು ರೆಸ್ಟೋರೆಂಟ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಈ ಕುರಿತು ನೋಯ್ಡಾದ ಸಹಾಯಕ ಆಹಾರ ಆಯುಕ್ತ ಸರ್ವೇಶ್ ಕುಮಾರ್ ಮಾತನಾಡಿ, ರೆಸ್ಟೋರೆಂಟ್‌ನಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದೇವೆ. ತನಿಖೆ ನಡೆಯುತ್ತಿದೆ. ಪರೀಕ್ಷಾ ಕೇಂದ್ರದಿಂದ ವರದಿ ಹಾಗೂ ಇತರ ಸಂಶೋಧನೆಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಇದನ್ನೂ ಓದಿ: 3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ 6 ಗಂಟೆಯಲ್ಲಿ ರೈಲು ನಿಲ್ದಾಣ ನಿರ್ಮಿಸಿದ ಜಪಾನ್