ನವ ದೆಹಲಿ: ಲೈಂಗಿಕ ಕ್ರಿಯೆಗೆ ಒಪ್ಪದ 13 ವರ್ಷದ ಬಾಲಕನ ಮರ್ಮಾಂಗಕ್ಕೆ ಬಿಸಿ ಇಕ್ಕಳದಿಂದ ಬರೆ ಹಾಕಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಗ್ರೇಟರ್ ನೋಯ್ಡಾದ ಬದಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಪ್ರೌಲ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆ ಬಳಿಕ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದು, ಮಂಗಳವಾರ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಘಟನೆ ವಿವರ:
ಶುಕ್ರವಾರ ಮಹಿಳೆ ನೆರೆ ಮನೆಯ ಬಾಲಕನನ್ನು ಕರೆದಿದ್ದಾಳೆ. ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದ ಆಕೆ, ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾಳೆ. ಆದ್ರೆ ಬಾಲಕ ಲೈಂಗಿಕ ಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದನು. ಇದರಿಂದ ಸಿಟ್ಟುಗೊಂಡ ಆಂಟಿ ಮರ್ಮಾಂಗಕ್ಕೆ ಬಿಸಿ ಇಕ್ಕುಳದಿಂದ ಬರೆ ಕೊಟ್ಟಿದ್ದಾಳೆ. ಈ ಸಂಬಂಧ ಪೋಷಕರು ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement
ದೂರಿನ್ವಯ ಮಂಗಳವಾರ ಐಪಿಸಿ ಸೆಕ್ಷನ್ 323, 324, 342, 363 ಮತ್ತು 506ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಘಟನೆ ಬಳಿಕ ನಾಪತ್ತೆಯಾಗಿರುವ ಮಹಿಳೆ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
ಘಟನೆ ಶುಕ್ರವಾರ ನಡೆದಿದ್ದರೂ ಪೋಷಕರು ಮಂಗಳವಾರ ದೂರು ದಾಖಲಿಸಿದ್ದು ಏಕೆ? ಮಹಿಳೆಗೂ ಮತ್ತು ಬಾಲಕನ ಪೋಷಕರ ನಡುವೆ ಏನಾದರೂ ಜಗಳ ಇತ್ತೇ? ಎಂಬಿತ್ಯಾದಿ ಕುರಿತು ಎಲ್ಲ ವಿಚಾರವಾಗಿ ತನಿಖೆ ನಡೆಯಲಿದೆ ಅಂತಾ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv