ನವದೆಹಲಿ: ಅದು ಭಾರತ ಅತಿ ಎತ್ತರದ ವಸತಿ ಕಟ್ಟಡ. ಕುತುಬ್ ಮಿನಾರ್ ಮೀರಿಸುವ ಹೈಟ್. ಆದರೆ ಸುಪ್ರೀಂಕೋರ್ಟ್ ನೀಡಿದ ಒಂದು ಆದೇಶ ಆ ಕಟ್ಟಡದ ಬುಡವನ್ನೇ ಅಲ್ಲಾಡುವಂತೆ ಮಾಡಿದೆ. 9 ಸೆಕೆಂಡ್ ನಲ್ಲಿ 900 ಮನೆಗಳಿರುವ ಬೃಹತ್ ಕಟ್ಟಡ ನೆಲ ಸಮಯವಾಗಲಿದೆ.
Advertisement
ಹೌದು. ದೆಹಲಿಯ ನೊಯ್ಡಾದ ಸೆಕ್ಟರ್ 63ರಲ್ಲಿರುವ ಈ ಅವಳಿ ಕಟ್ಟಡಗಳು ಸದ್ಯಕ್ಕೆ ಭಾರತದಲ್ಲಿರುವ ಅತಿ ಎತ್ತರದ ವಸತಿ ಸಮುಚ್ಚಯಗಳಾಗಿವೆ. ಕುತುಬ್ ಮಿನಾರ್ ಗಿಂತಲೂ ಎತ್ತರದಲ್ಲಿರುವ ಈ ಕಟ್ಟಡಗಳನ್ನು ಕೆಡವಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ ಭಾನುವಾರ ಮಧ್ಯಾಹ್ನದ ಬಳಿಕ ನೊಯ್ಡಾ ಪ್ರಾಧಿಕಾರ ಈ ಬೃಹತ್ ಕಟ್ಟಡವನ್ನು ನೆಲ ಸಮ ಮಾಡಲಿದೆ.
Advertisement
Advertisement
ಸೂಪರ್ಟೆಕ್ ಸಂಸ್ಥೆ ನಿರ್ಮಿಸಿರುವ ಈ ಕಟ್ಟಡ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಈ ಟ್ವಿನ್ ಟವರ್ಸ್ ಕೆಡವಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಹಿನ್ನೆಲೆ ಕಟ್ಟಡ ಧ್ವಂಸ ಮಾಡಲು ಸೂಚನೆ ನೀಡಿದೆ. ಈ ಹಿನ್ನಲೆ ಕಳೆದೊಂದು ವಾರದಿಂದ ಕಟ್ಟಡ ಕೆಡವಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ಲೇಡಿ ಸಿಂಗಂ ಇನ್ನಿಲ್ಲ!
Advertisement
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ನಾಳೆ ಮಧ್ಯಾಹ್ನ ಈ ಕಟ್ಟಡ ಕೆಡವಲು ತಿರ್ಮಾನಿಸಿದೆ. ಇದಕ್ಕಾಗಿ 3700 ಕಿಲೋ ಸ್ಪೋಟಕಗಳನ್ನು ಬಳಸಲಾಗುತ್ತಿದೆ. ಒಂದೇ ಕ್ಲಿಕ್ ನಲ್ಲಿ. 900 ಮನೆಗಳಿರುವ ಈ ಅಪಾಟ್ರ್ಮೆಂಟ್ ದ್ವಂಸ ಮಾಡಲಾಗುತ್ತಿದೆ. ಸುಮಾರು 20 ಕೋಟಿ ವ್ಯಯ ಮಾಡಿ ನಿರ್ಮಿಸಿದ ಈ ಕಟ್ಟಡವನ್ನು ಕೆಡವಲು ಸುಮಾರು 20 ಕೋಟಿ ಹಣವನ್ನು ಖರ್ಚು ಮಾಡಲಾಗುತ್ತಿದೆ.
ಕೇರಳದ ಮಾದರಿಯಲ್ಲಿ ಈ ಕಟ್ಟಡ ಕೆಡವಲು ತಿರ್ಮಾನ ಮಾಡಿದ್ದು ಪಕ್ಕದ ಕಟ್ಟಡಗಳಿಗೆ ತೊಂದರೆಯಾಗದಂತೆ ಒಳಮುಖವಾಗಿ ಕೆಡವಲು ಪ್ಲ್ಯಾನ್ ಮಾಡಲಾಗಿದೆ. ಇದಕ್ಕಾಗಿ ಸೌತ್ ಆಫ್ರಿಕಾದ ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಹೀಗಾಗಿ ದೇಶದಲ್ಲಿ ಮೊದಲ ಬಾರಿಗೆ ಬೃಹತ್ ಕಟ್ಟಡವೊಂದು ಧರಾಶಾಹಿಯಾಗಲಿದೆ.