ಲಕ್ನೋ: ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ ನಂತರ ಪರಾರಿಯಾಗಿದ್ದ ನೊಯ್ಡಾದ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಇಂದು ಮೀರತ್‌ನಲ್ಲಿ ಬಂಧಿಸಿದ್ದಾರೆ.
Advertisement
ತ್ಯಾಗಿ ಅವರ ವಕೀಲರು ಗ್ರೇಟರ್ ನೋಯ್ಡಾ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ್ದರು. ತ್ಯಾಗಿ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಇದಾದ ಬಳಿಕ ತ್ಯಾಗಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ಮತ್ತೆ ಜೆಸಿಬಿ ಘರ್ಜನೆ – ಬಿಜೆಪಿ ನಾಯಕನ ಅಕ್ರಮ ಕಟ್ಟಡ ನೆಲಸಮ
Advertisement
ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಮಹಿಳೆ ಮೇಲೆ ತ್ಯಾಗಿ ಹಲ್ಲೆ ನಡೆಸಿದ್ದರು. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಘಟನೆ ಬಳಿಕ ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದರು.
Advertisement
Advertisement
ನಿನ್ನೆ ಪೊಲೀಸ್ ಸಿಬ್ಬಂದಿಯೊಂದಿಗೆ ನೊಯ್ಡಾದ ಸೆಕ್ಟರ್ -93ಬಿನಲ್ಲಿರುವ ಗ್ರಾಂಡ್ ಓಮ್ಯಾಕ್ಸ್ ಸೊಸೈಟಿಗೆ ತಲುಪಿದ ಅಧಿಕಾರಿಗಳು, ನಂತರ ಬಿಜೆಪಿಯ ಕಿಸಾನ್ ಮೋರ್ಚಾದ ಆಪಾದಿತ ಸದಸ್ಯ ಶ್ರೀಕಾಂತ್ ತ್ಯಾಗಿ ಅವರಿಗೆ ಸೇರಿದ್ದ ಅಕ್ರಮ ಕಟ್ಟಡವನ್ನು ಕೆಡವಿದ್ದರು. ಇದನ್ನೂ ಓದಿ: ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ