ಲಕ್ನೋ: 7ನೇ ಮಹಡಿಯಿಂದ ಬಿದ್ದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಆತನ ಮಾಜಿ ಪ್ರೇಯಸಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೃತನನ್ನು 23 ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿ ತಪಸ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯಾಚರಣೆ – 8 ನಕಲಿ ಕ್ಲಿನಿಕ್ ಮೇಲೆ ದಾಳಿ
Advertisement
Advertisement
ಶನಿವಾರ ನೋಯ್ಡಾದ (Noida) ಅಪಾರ್ಟ್ಮೆಂಟ್‌ನ ಏಳನೇ ಮಹಡಿಯಿಂದ ಬಿದ್ದು ತಪಸ್ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ತಪಸ್ ಕುಟುಂಬಸ್ಥರು ಆತನ ಮಾಜಿ ಪ್ರೇಯಸಿ ವಿರುದ್ಧ ಕಿರುಕುಳ ಆರೋಪದ ಮೇಲೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಸದ್ಯ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದರಲ್ಲಿ ಯಾವುದೇ ರೀತಿಯ ಆತ್ಮಹತ್ಯೆ ಪ್ರಚೋದನೆ ನೀಡಲಾಗಿಲ್ಲ ಎಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Advertisement
ಘಟನೆ ಏನು?
ಮೃತ ತಪಸ್ ಗಾಜಿಯಾಬಾದ್‌ನಲ್ಲಿ (Ghaziabad) ವಾಸಿಸುತ್ತಿದ್ದು, ಅಮಿಟಿ ವಿಶ್ವವಿದ್ಯಾನಿಲಯದಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ. ಈ ವೇಳೆ ಮಾಜಿ ಪ್ರೇಯಸಿಯ ಪರಿಚಯವಾಗಿತ್ತು. ಈ ನಡುವೆ ಅವರಿಬ್ಬರ ನಡುವೆ ಸಂಬಂಧ ಬೆಳೆದಿತ್ತು. ಬಳಿಕ ಅವರಿಬ್ಬರು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಇತ್ತೀಚೆಗಷ್ಟೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಆತನ ಮಾಜಿ ಪ್ರೇಯಸಿ ಸಂಬಂಧವನ್ನು ಕೊನೆಗೊಳಿಸುವಂತೆ ನಿರ್ಧರಿಸಿದ್ದಳು. ಇದನ್ನು ತಿಳಿದ ತಪಸ್ ಸಂಬಂಧವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದ.
Advertisement
ಶನಿವಾರ ನೋಯ್ಡಾದ ಸೆಕ್ಟರ್ 99ರಲ್ಲಿ ಸುಪ್ರೀಂ ಟವರ್ಸ್ನಲ್ಲಿರುವ ಸ್ನೇಹಿತನ ಮನೆಗೆ ತಪಸ್ ಭೇಟಿ ನೀಡಿದ್ದರು. ಈ ವೇಳೆ ಆತನ ಸ್ನೇಹಿತರು ಮಾಜಿ ಪ್ರೇಯಸಿಯೊಂದಿಗೆ ಸಂಬಂಧ ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದರು. ಬಳಿಕ ಆತನ ಪ್ರೇಯಸಿ ಅಲ್ಲಿಗೆ ಬಂದಿದ್ದು, ಈ ಸಮಯದಲ್ಲಿ ತಪಸ್ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದ. ಆದರೆ ಆಕೆ ಒಪ್ಪದ ಕಾರಣ ತಪಸ್ ಏಳನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ನೋಯ್ಡಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಸಹೋದರ ಶೀಘ್ರ ಗುಣಮುಖರಾಗಲಿ: ಸಿ.ಟಿ.ರವಿ ಪ್ರಾರ್ಥನೆ