– ಕಾರು ಹತ್ತಿಸಿ ಯಾರಾದ್ರೂ ಸತ್ತಿದ್ದಾರಾ ಅಂತ ಕೇಳಿದ ಚಾಲಕ
ಲಕ್ನೋ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಗಂಟೆಗೆ 300 ಕಿಮೀ ವೇಗದಲ್ಲಿ ಬಂದ ಲ್ಯಾಂಬೋರ್ಗಿನಿ ಕಾರು (Lamborghini Car) ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ ನುಗ್ಗಿದೆ. ಈ ವೇಳೆ ಫುಟ್‌ಪಾತ್‌ನಲ್ಲಿದ್ದ ಛತ್ತೀಸ್‌ಗಢದ ಇಬ್ಬರು ಕಾರ್ಮಿಕರಿಗೆ (Labourers) ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ಈ ವೇಳೆ ಕಾರು ಚಾಲಕ ತೋರಿದ ವರ್ತನೆ, ನೀಡಿದ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿದೆ.
ನೋಯ್ಡಾದ ಸೆಕ್ಟರ್ 94ರಲ್ಲಿ (Noida’s sector 94) ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಈ ಘಟನೆ ನಡೆದಿದೆ. ಆದ್ರೆ ವೇಗವಾಗಿ ಕಾರು ಚಲಾಯಿಸಿಕೊಂಡ ಬಂದ ವ್ಯಕ್ತಿ ಅಪಘಾತ ಮಾಡಿ, ಏನೂ ನಡೆದಿಲ್ಲ ಅನ್ನುವಂತೆ ಕೂಲಾಗಿ ಇಳಿದು ಯಾರಾದ್ರು ಸತ್ತಿದ್ದಾರಾ? ಅಂತ ಕೇಳಿದ್ದಾನೆ. ಈ ಅಮಾನವೀಯ ಪ್ರತಿಕ್ರಿಯೆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಸದ್ಯ ಕಾರು ಚಾಲಕನಾದ ಅಜ್ಮೀರ್ ನಿವಾಸಿ ದೀಪಕ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮೀರತ್ ಮಾದರಿ ಪೀಸ್ ಪೀಸ್ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!
ದೀಪಕ್ ಅಜ್ಮೀರ್ ಮೂಲತಃ ಕಾರು ಮಾರಾಟಗಾರ. ಈತ ಕಾರಿನ ಟೆಸ್ಟ್ ಡ್ರೈವ್‌ಗಾಗಿ ನೊಯ್ಡಾಗೆ ಬಂದಿದ್ದ. ಕಾರಿನ ಮಾಲೀಕ ಮೃದುಲ್, ಸೆಕ್ಟರ್ 94 ರ ಸೂಪರ್ನೋವಾದ ನಿವಾಸಿ. ಅವರು ಯೂಟ್ಯೂಬರ್ (YouTuber) ಆಗಿದ್ದು, 18.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬೇಸಿಗೆ ಅವಧಿಯಲ್ಲಿ ಮುಂಬೈ-ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ
ಪೊಲೀಸರ ಪ್ರಕಾರ, ದೀಪಕ್ ಒಬ್ಬನೇ ಕಾರು ಚಲಾಯಿಸುತ್ತಿದ್ದಾಗ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯಿಂದ ಪ್ರಕಾರ ದೀಪಕ್ ಭಾನುವಾರ ಬೆಳಗ್ಗೆ ಕಾರು ಟೆಸ್ಟ್ ಡ್ರೈವ್ ,ಮಾಡಲು ನೊಯ್ಡಾಗೆ ಬಂದಿದ್ದ. ಆತ ಕಾರನ್ನು ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗಿ, ಸ್ವಲ್ಪ ಶಾಪಿಂಗ್ ಕೂಡಾ ಮಾಡಿ, ವಾಪಸ್ ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಾಗ ಕಾರಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದನ್ನ ಅಲ್ಲಿನ ಜನ ಪ್ರಶ್ನೆ ಮಾಡಿದಾಗ ಯಾರಾದ್ರೂ ಸತ್ತಿದ್ದಾರಾ? ಅಂತ ವಿಚಿತ್ರವಾಗಿ ಪ್ರಶ್ನೆ ಮಾಡಿದ್ದಾನೆ. ಜೊತೆಗೆ ಇದು ನನ್ನ ತಪ್ಪಲ್ಲ, ಕಾರಿನ ತಪ್ಪು ಅಂತ ಉದ್ಧಟತನ ಮೆರೆದಿದ್ದಾನೆ. ಚಾಲಕನ ಹೇಳಿಕೆ ವಿಡಿಯೋ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದ್ದು, ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸದ್ಯ ಘಟನೆಯಲ್ಲಿ ಛತ್ತಿಸ್‌ಗಢ ಮೂಲದ ಇಬ್ಬರು ಕಾರ್ಮಿಕರರು ಪ್ರಾಣಾಪಾಯದಿಂದ ಪಾರಾಗಿದ್ದು, ಕೈ, ಕಾಲುಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅಪಘಾತದ ಸಂದರ್ಭದಲ್ಲಿ ಕಾರು ಸುಮಾರು 300 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಸಂತ್ರಸ್ತರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಕಂತೆ ಕಂತೆ ನೋಟು – ಸಿಜೆಐ ಅನುಮತಿ ನೀಡದ ಹೊರತು ಎಫ್‌ಐಆರ್ ದಾಖಲಾಗಲ್ಲ: ಅಮಿತ್ ಶಾ