LatestLeading NewsMain PostNational

ಸಾಕು ಪ್ರಾಣಿಗಳಿಂದ ತೊಂದರೆ ಉಂಟಾದ್ರೆ ಮಾಲೀಕರಿಗೆ ಬೀಳುತ್ತೆ 10,000 ರೂ. ದಂಡ – ಎಲ್ಲಿ ಗೊತ್ತಾ?

ಲಕ್ನೋ: ಶ್ವಾನಗಳ ಹಾವಳಿ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ನೋಯ್ಡಾ (Noida) ಪ್ರಾಧಿಕಾರವು ಸಾಕುಪ್ರಾಣಿಗಳಿಗೆ (Pet Animals) ಸಂಬಂಧಿಸಿದಂತೆ ಹೊಸ ನೀತಿಯನ್ನು ರೂಪಿಸಿದೆ. ಇನ್ಮುಂದೆ ಸಾಕುಪ್ರಾಣಿಗಳಿಂದ ತೊಂದರೆ ಉಂಟಾದರೆ, ಮಾಲೀಕರು 10,000 ರೂ. ದಂಡ ಪಾವತಿಸಬೇಕಾಗುತ್ತದೆ.

ಪ್ರಾಧಿಕಾರವು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಸಾಕುಪ್ರಾಣಿಗಳ ಮಾಲೀಕರು ತಮ್ಮ ಶ್ವಾನ (Dog) ಅಥವಾ ಬೆಕ್ಕುಗಳನ್ನು ಮುಂದಿನ ವರ್ಷ ಜನವರಿ 31 ರೊಳಗೆ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ ಸಾಕು ನಾಯಿ ಅಥವಾ ಬೆಕ್ಕುಗಳಿಂದ (Cat) ಯಾವುದೇ ಅನಾಹುತ ಉಂಟಾದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಕ್ಷಮೆ ಕೋರುವೆ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ (AWBI) ಮಾರ್ಗಸೂಚಿಗಳಿಗೆ ಅನುಗುಣವಾಗಿ ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಗರದಲ್ಲಿ ಶ್ವಾನಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ.

ನೋಯ್ಡಾ ಪ್ರಾಧಿಕಾರದ ಹೊಸ ನೀತಿಯ ಪ್ರಕಾರ, ಸಾಕು ನಾಯಿಗಳು ಅಥವಾ ಬೆಕ್ಕುಗಳ ನೋಂದಣಿಯು ಜನವರಿ 31, 2023 ರವರೆಗೆ ಕಡ್ಡಾಯವಾಗಿದೆ. ನೋಂದಣಿಯಾಗದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ. ಅಷ್ಟೇ ಅಲ್ಲದೆ ಸಾಕು ನಾಯಿಗಳಿಗೆ ಕ್ರಿಮಿನಾಶಕ ಅಥವಾ ಆ್ಯಂಟಿರೇಬಿಸ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದರೆ ಪ್ರತಿ ತಿಂಗಳು 2,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಇದನ್ನೂ ಓದಿ: ದ್ರೌಪದಿ ಮುರ್ಮು ನೋಡಲು ಹೇಗಿದ್ದಾರೆ ಗೊತ್ತಲ್ಲ- ವಿವಾದವಾಗ್ತಿದ್ದಂತೆ ಟಿಎಂಸಿ ಸಚಿವ ಕ್ಷಮೆ

ಸಾರ್ವಜನಿಕ ಸ್ಥಳದಲ್ಲಿ ಸಾಕು ಪ್ರಾಣಿಯಿಂದ ಮಲೀನವಾದರೆ, ಅದನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಪ್ರಾಣಿಗಳ ಮಾಲೀಕರ ಮೇಲಿದೆ. ಒಂದು ವೇಳೆ ಸಾಕುಪ್ರಾಣಿ ದಾಳಿಯಿಂದ ವ್ಯಕ್ತಿ ಗಾಯಗೊಂಡರೆ, ಅವರ ಚಿಕಿತ್ಸೆಯ ವೆಚ್ಚವನ್ನು ಪ್ರಾಣಿ ಮಾಲೀಕರೇ ಭರಿಸಬೇಕಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.

Live Tv

Leave a Reply

Your email address will not be published. Required fields are marked *

Back to top button