– ಅತ್ಯುತ್ತಮ ರಾಷ್ಟ್ರೀಯ ಉಡುಗೆಗೂ ಅವಾರ್ಡ್
ನವದೆಹಲಿ: ಮಂಗಳವಾರದಂದು ನೋಯ್ಡಾದ ನಿವಾಸಿ ಸೃಷ್ಟಿ ಕೌರ್ 2017ನೇ ಸಾಲಿನ ಮಿಸ್ ಟೀನ್ ಯೂನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
Advertisement
ಮಧ್ಯ ಅಮೆರಿಕ ದೇಶವಾದ ನಿಕಾರಾಗುವಾದ ಮನಾಗುವಾದಲ್ಲಿ ಈ ಸೌಂದರ್ಯ ಸ್ಪರ್ಧೆ ನಡೆದಿದ್ದು, ಸೃಷ್ಟಿ ವಿಶ್ವದಾದ್ಯಂತ ವಿವಿಧ ದೇಶಗಳಿಂದ ಬಂದಿದ್ದ 25 ಸ್ಪರ್ಧಿಗಳನ್ನ ಹಿಂದಿಕ್ಕಿ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಮೆಕ್ಸಿಕೋದ ಆ್ಯರಿ ಟ್ರಾವಾ ಹಾಗೂ ಕೆನಡಾದ ಸಮಂತಾ ಪೆರ್ರಿ ಇದ್ರು.
Advertisement
Advertisement
ಇದರ ಜೊತೆಗೆ ಸೃಷ್ಟಿ ಅತ್ಯುತ್ತಮ ರಾಷ್ಟ್ರೀಯ ಉಡುಗೆಗೂ ಅವಾರ್ಡ್ ಪಡೆದಿದ್ದಾರೆ. ಭಾರತದ ರಾಷ್ಟ್ರಪಕ್ಷಿ ನವಿಲನ್ನು ಸೃಷ್ಟಿ ತಮ್ಮ ಉಡುಗೆಯಲ್ಲಿ ಪ್ರದರ್ಶಿಸಿದ್ದರು. ಸೃಷ್ಟಿ ನೋಯ್ಡಾದ ಲೋಟಸ್ ವ್ಯಾಲಿ ಇಂಟರ್ ನ್ಯಾಷನಲ್‍ನಲ್ಲಿ ಓದಿದ್ದು, ಸದ್ಯಕ್ಕೆ ಲಂಡನ್ ಸ್ಕೂನ್ ಆಫ್ ಫ್ಯಾಷನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Advertisement
ಇದೇ ವರ್ಷದ ಆರಂಭದಲ್ಲಿ ಸೃಷ್ಟಿ 29 ಸ್ಪರ್ಧಿಗಳನ್ನ ಹಿಂದಿಕ್ಕಿ ಮಿಸ್ ಟೀನ್ ಟಿಯಾರಾ ಇಂಟರ್‍ನ್ಯಾಷನಲ್ ಪಟ್ಟವನ್ನ ತನ್ನದಾಗಿಸಿಕೊಂಡಿದ್ದರು. ಈ ಸೌಂದರ್ಯ ಸ್ಪರ್ಧೆಯನ್ನ 6 ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದು 15 ರಿಂದ 19 ವರ್ಷ ವಯಸ್ಸಿನವರಿಗಾಗಿ ಮಿಸ್ ಯೂನಿವರ್ಸ್ ಸಂಸ್ಥೆ ಈ ಸ್ಪರ್ಧೆಯನ್ನ ಆಯೋಜಿಸುತ್ತದೆ.