ನೋಯ್ಡಾದಲ್ಲಿ ಸ್ಕೂಟಿಗೆ BMW ಕಾರು ಡಿಕ್ಕಿ – 5 ವರ್ಷದ ಬಾಲಕಿ ಸಾವು

Public TV
1 Min Read
Noida BMW Car Accident

ನವದೆಹಲಿ: ಸ್ಕೂಟಿಗೆ (Scooty) ಬಿಎಂಡಬ್ಲ್ಯೂ ಕಾರು (BMW Car) ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನೋಯ್ಡಾ (Noida) ಸೆಕ್ಟರ್-20ರಲ್ಲಿ ನಡೆದಿದೆ.

ನೋಯ್ಡಾದ ಸೆಕ್ಟರ್ 45 ಬಳಿಯ ಸದರ್ಪುರದ ನಿವಾಸಿಗಳಾದ ಗುಲ್ ಮೊಹಮ್ಮದ್ ಮತ್ತು ಅವರ ಸೋದರ ಮಾವ ರಾಜ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮಗಳು ಆಯತ್‌ಗೆ ಅನಾರೋಗ್ಯ ಹಿನ್ನೆಲೆ ಸ್ಕೂಟಿಯಲ್ಲಿ ಮಗಳನ್ನು ಸೆಕ್ಟರ್ 30ರಲ್ಲಿರುವ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ಗುಲ್ ಮೊಹಮ್ಮದ್ ಹಾಗೂ ಮಾವ ರಾಜ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಮಳೆ – ಭೂಕುಸಿತ ಆತಂಕದ ನಡುವೆಯೇ ಜನರ ಜೀವನ

ಘಟನೆ ಬಳಿಕ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ಚಾಲಕ ಮತ್ತು ಸಹ-ಪ್ರಯಾಣಿಕನನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮುಂಗಾರು ಅಬ್ಬರ – ಕಾವೇರಿ ನದಿಯಲ್ಲಿ ಪಿಂಡ ಪ್ರದಾನ ನಿಷೇಧ

Share This Article