3 ಸಾವಿರ ರೂ. ಸಾಲ ಮರುಪಾವತಿಸದ್ದಕ್ಕೆ ವ್ಯಕ್ತಿಯ ಬೆತ್ತಲೆ ಮೆರವಣಿಗೆ!

Public TV
1 Min Read
CRIME

ನವದೆಹಲಿ: ಕಮಿಷನ್ ಏಜೆಂಟ್‍ನಿಂದ ಸಾಲವಾಗಿ (Loan) ಪಡೆದ 3,000 ರೂ. ಮರುಪಾವತಿಸದ ವ್ಯಕ್ತಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ನೋಯ್ಡಾದಲ್ಲಿ (Noida) ನಡೆದಿದೆ.

ತಿಂಗಳ ಹಿಂದೆ ಕಮಿಷನ್ ಏಜೆಂಟ್ ಸುಂದರ್ ಎಂಬಾತನಿಂದ ವ್ಯಾಪಾರಿಯೊಬ್ಬ 5,600 ರೂ. ಸಾಲ ಪಡೆದಿದ್ದ. ಬಳಿಕ 2,500 ರೂ. ಹಿಂದಿರುಗಿಸಿದ್ದು, ಉಳಿದ ಮೊತ್ತವನ್ನು ಮರುಪಾವತಿಸಲು ಸ್ವಲ್ಪ ಸಮಯ ಕೇಳಿದ್ದ. ಆದರೆ ನಿಗದಿತ ಸಮಯದಲ್ಲಿ ಸಾಲ ಮರುಪಾವತಿಸದ ಕಾರಣ ಏಜೆಂಟರ್ ಹಾಗೂ ಆತನ ಸಹಾಯಕರು ಸೇರಿ ವ್ಯಾಪಾರಿಯ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಮ್ಯಾನೇಜರ್‌ಗೆ ಬೆದರಿಸಿ 5.6 ಕೋಟಿ ರೂ. ಲೂಟಿ

ಈ ಆಘಾತಕಾರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ವೀಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ವೀಡಿಯೋ ಶೇರ್ ಮಾಡುವವರ ವಿರುದ್ಧ ಸಹ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ಪ್ರಕರಣ ಸಂಬಂಧ ಏಜೆಂಟರ್ ಸುಂದರ್ ಹಾಗೂ ಮತ್ತೋರ್ವ ಆರೋಪಿ ಭಗಂದಾಸ್‍ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ಸಂಕಷ್ಟ – ದಿಲ್ಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭೇಟಿಯಾದ ಡಿಕೆಶಿ

Web Stories

Share This Article