ನವದೆಹಲಿ: ಪ್ರಜಾಪ್ರಭುತ್ವದ ಹಬ್ಬಕ್ಕೆ ಇಂದು ಚಾಲನೆ ಸಿಕ್ಕಿದ್ದು, ದೇಶದ ಮತದಾರರು ಹುರುಪಿನಿಂದಲೇ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ದೆಹಲಿಯ ನೋಯ್ಡಾದಲ್ಲಿ ಮತದಾರರ ಸಾಲು ರಸ್ತೆಗೆ ಬಂದಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.
ನೋಯ್ಡಾದ ಸೆಕ್ಟರ್ 78ರ ಮಂಥನಾ ಶಾಲೆ (ಬೂತ್ ನಂಬರ್ 6)ಯ ಮುಂದೆ ಮತದಾರರು ವೋಟ್ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಶಾಲೆಯ ಮುಖ್ಯದ್ವಾರದಿಂದ ಹೊರಗೆ ಬಂದರೂ ರಸ್ತೆಯ ಬದಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತ ಚಲಾಯಿಸುತ್ತಿದ್ದಾರೆ. ಬಿಸಿಲು ಹೆಚ್ಚಾಗಿದ್ದರಿಂದ ಬಹುತೇಕರು ಛತ್ರಿಗಳಿಂದ ಸೂರ್ಯನಿಂದ ರಕ್ಷಣೆ ಪಡೆದುಕೊಂಡಿರೋದನ್ನು ಫೋಟೋದಲ್ಲಿ ನೋಡಬಹುದಾಗಿದೆ.
ನೋಯ್ಡಾದ ಸೆಕ್ಟರ್ 78 ಗೌತಮ್ ಬುದ್ಧ ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಬಿಜೆಪಿ ಅಭ್ಯರ್ಥಿಯಾಗಿ ಡಾ. ಮಹೇಶ್ ಶರ್ಮಾ ಮತ್ತು ಕಾಂಗ್ರೆಸ್ನಿಂದ ಡಾ.ಅರವಿಂದ್ ಸಿಂಗ್ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.