ಬೆಂಗಳೂರು : ನಮ್ಮ ಭಾರತ ಭವ್ಯ ಭಾರತ. ಯಾರು ಒಡೆಯುವ ಮಾತು ಅಡಬಾರದು ಅಂತ ಸಂಸದ ಡಿಕೆ ಸುರೇಶ್ ಗೆ ಗೃಹ ಸಚಿವ ಪರಮೇಶ್ವರ್ (G Parameshwar) ತಿರುಗೇಟು ಕೊಟ್ಟಿದ್ದಾರೆ.
ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂಬ ಸಂಸದ ಡಿಕೆ ಸುರೇಶ್ (DK Suresh) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಸುರೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈ ದೇಶ ಒಗ್ಗೂಡಿಸಲು ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ನೂರಾರು ವರ್ಷ ಹೋರಾಟಗಳು ನಡೆದಿವೆ. ಗಾಂಧೀಜಿಯಿಂದ ಹಿಡಿದು ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ್ಯ ತರಲು, ದೇಶ ಒಗ್ಗೂಡಿಸಲು ಹೋರಾಟ ಮಾಡಿದ್ದಾರೆ. ಅನೇಕರು ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಯಾರೇ ಆದರೂ ದೇಶ ಒಗ್ಗೂಡಿಸುವ ಮಾತಾಡಬೇಕು. ಅದು ಬಿಟ್ಟು ಒಡೆಯೋ ಮಾತಾಡೋದು ಸರಿಯಲ್ಲ ಎಂದರು.
ನಮ್ಮ ಭಾರತ ಭವ್ಯವಾದ ಭಾರತ. ಪಾಕಿಸ್ತಾನ ವಿಭಜನೆ ಆದಾಗ ನಾವು ಯಾರೂ ಹುಟ್ಟಿರಲಿಲ್ಲ. ಆದರೆ ಅದರ ಇತಿಹಾಸ ನಮಗೆ ಗೊತ್ತಿದೆ. ನಮ್ಮ ದೇಶ ಒಂದು ರಾಷ್ಟ್ರ ಒಂದು ದೇಶ ಅಂತಾನೇ ಇರಬೇಕು ಬೇಕು ಅಂತ ಡಿಕೆ ಸುರೇಶ್ ಗೆ ತಿರುಗೇಟು ಕೊಟ್ರು. ಇದನ್ನೂ ಓದಿ: ಪ್ರತ್ಯೇಕ ದೇಶ ಕೇಳೋಕೆ ಆಗಲ್ಲ: ಸಿದ್ದರಾಮಯ್ಯ