BollywoodCinemaLatestNational

ಇದುವರೆಗೂ ನಂಗೆ ಯಾರೂ ಪ್ರಪೋಸ್ ಮಾಡಿಲ್ಲ: ದಿಶಾ ಪಠಾಣಿ

Advertisements

ಮುಂಬೈ: ಬಾಲಿವುಡ್ ಹಾಟ್ ಬೆಡಗಿ ದಿಶಾ ಪಠಾಣಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಿರುವಾಗ ದಿಶಾ ತಮಗೆ ಇದುವರೆಗೂ ಯಾರು ಪ್ರಪೋಸ್ ಮಾಡಿಲ್ಲ ಎಂದು ಹೇಳುವ ಮೂಲಕ ತಮ್ಮ ದುಃಖವನ್ನು ಹೊರ ಹಾಕಿದ್ದಾರೆ.

ಇತ್ತೀಚೆಗೆ ದಿಶಾ ತಮ್ಮ ಮುಂಬರುವ ‘ಮಲಂಗ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಭಾಗವಹಿಸಿದ ಅವರು, “ಇದುವರೆಗೂ ನನಗೆ ಯಾವ ಹುಡುಗ ಕೂಡ ಪ್ರಪೋಸ್ ಮಾಡಿಲ್ಲ” ಎಂದು ಹೇಳಿದ್ದಾರೆ.

ನಾನು ಶಾಲೆಯಲ್ಲಿ ಇರುವಾಗ ಟಾಮ್‍ಬಾಯ್‍ನಂತೆ ಇದ್ದೆ. ಹಾಗಾಗಿ ಯಾರು ನನಗೆ ಪ್ರಪೋಸ್ ಮಾಡಿಲ್ಲ. ಅಲ್ಲದೆ ನನ್ನ ತಂದೆ ಪೊಲೀಸ್ ಅಧಿಕಾರಿ. ಹಾಗಾಗಿ ಯಾರು ನನ್ನ ಬಳಿ ತಮ್ಮ ಪ್ರೀತಿ ನಿವೇದನೆ ಮಾಡಿಕೊಂಡಿಲ್ಲ. ಕಾಲೇಜಿನಲ್ಲೂ ಕೂಡ ಯಾವ ಹುಡುಗ ಕೂಡ ನನಗೆ ಪ್ರಪೋಸ್ ಮಾಡಿಲ್ಲ. ನಾನು ಪಾರ್ಟಿಯಲ್ಲಿ ಭಾಗವಹಿಸುವುದಿಲ್ಲ. ಹಾಗಾಗಿ ನನಗೆ ಯಾವುದೇ ಪ್ರಪೋಸಲ್ ಬಂದಿಲ್ಲ. ನನ್ನದು ತುಂಬಾ ದುಃಖದ ಜೀವನ ಎಂದು ದಿಶಾ ಹೇಳಿದ್ದಾರೆ.

ಮಲಂಗ್ ಚಿತ್ರದಲ್ಲಿ ದಿಶಾ ಅವರ ನಟನೆ ನೋಡಿ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ದಿಶಾ ಈಗ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆಯ ‘ರಾಧೆ- ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಟ, ನಿರ್ದೇಶಕ ಪ್ರಭುದೇವ ನಿರ್ದೇಶಿಸುತ್ತಿದ್ದಾರೆ.

Leave a Reply

Your email address will not be published.

Back to top button