ಗಾಂಧಿನಗರ: ಶಾಲೆಯಲ್ಲಿ ಶಿಕ್ಷಕರು ಹಾಜರಿ ಕೂಗಿದರೆ ವಿದ್ಯಾರ್ಥಿಗಳು ಎಸ್ ಸರ್ ಎನ್ನುವ ಬದಲಾಗಿ ಜೈ ಹಿಂದ್/ ಜೈ ಭಾರತ್ ಅಂತ ಹೇಳಬೇಕು ಎಂದು ಗುಜರಾತ್ ಶಿಕ್ಷಣ ಇಲಾಖೆ ಆದೇಶ ಜಾರಿ ಮಾಡಿದೆ.
ಈ ಹಿಂದೆ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸರ್ಕಾರವು ಇಂತಹ ಆದೇಶ ಹೊರಡಿಸಿತ್ತು. ಇದರಿಂದಾಗಿ ಮಧ್ಯಪ್ರದೇಶದ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಕೆ.ಕೆ.ಮಿಶ್ರಾ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಗುಜರಾತ್ ಶಿಕ್ಷಣ ಇಲಾಖೆಯು ಕೂಡ ಹಾಜರಿ ಕೂಗಿದಾಗ ಮಕ್ಕಳು ಎಸ್ ಸರ್ ಬದಲಾಗಿ ಜೈ ಹಿಂದ್/ ಜೈ ಭಾರತ್ ಅಂತ ಹೇಳಬೇಕು ಎನ್ನುವ ಆದೇಶವನ್ನು ಜಾರಿಗೆ ಮಾಡಿದ್ದು, ಇಂದಿನಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ ಜೈ ಹಿಂದ್ ಮೊಳಗಲಿದೆ.
Advertisement
Advertisement
ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ಹಾಜರಿ ಕೂಗಿದರೆ ಜೈಹಿಂದ್ ಎಂದು ಹೇಳುವುದು ಕಡ್ಡಾಯವಾಗಿತ್ತು. ನಂತರದ ದಿನಗಳಲ್ಲಿ ಈ ಪದ್ಧತಿ ಇಲ್ಲದಂತಾಗಿ ಎಸ್ ಸರ್ ಎನ್ನಲು ಮಕ್ಕಳು ಪ್ರಾರಂಭಿಸಿದರು. ಹೀಗಾಗಿ ಈ ಪದ್ಧತಿಯನ್ನು ಮಂಗಳವಾರದಿಂದ ಮತ್ತೆ ಜಾರಿಗೆ ತರಲಾಗುತ್ತಿದೆ ಎಂದು ಶಿಕ್ಷಣ ಸಚಿವ ಭೂಪೇಂದ್ರ ಸಿಂಹ ಹೇಳಿದ್ದಾರೆ.
Advertisement
ಈ ಆದೇಶದಿಂದ ಮಕ್ಕಳು ತಮ್ಮ ಶಾಲಾ ದಿನಗಳಲ್ಲಿ ಸುಮಾರು 10 ಸಾವಿರ ಬಾರಿ ಜೈ ಹಿಂದ್/ ಜೈ ಭಾರತ್ ಎಂದು ಹೇಳಿದಂತಾಗುತ್ತದೆ. ಹೀಗಾಗಿ ಅವರಲ್ಲಿ ದೇಶಾಭಿಮಾನ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಆದೇಶವನ್ನು ಪಾಲಿಸುತ್ತಿದೆಯೇ ಎನ್ನುವುದನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳು (ಡಿಇಓ) ಪರಿಶೀಲನೆ ಮಾಡಬೇಕು ಅಂತ ಸೂಚನೆ ನೀಡಲಾಗಿದೆ. ರಾಜಸ್ಥಾನ ಮಾದರಿಯಂತೆ ಗುಜರಾತ್‍ನಲ್ಲಿ ರಾಜ್ಯದಲ್ಲಿ ಈ ಪದ್ಧತಿ ಅನುಸರಿಸಲಾಗುತ್ತಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರದ ನಿರ್ಧಾರವನ್ನು ಭೂಪೇಂದ್ರ ಸಿಂಹ ಸಮರ್ಥಿಸಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv