ಮಂಡ್ಯ: ಬಿಜೆಪಿಯಲ್ಲಿ ನೂರು ಬಾಗಿಲು, ನಮ್ಮಲ್ಲಿ ಒಂದೇ ಬಾಗಿಲು. ಯಡಿಯೂರಪ್ಪ (B.S Yediyurappa) ಇಲ್ಲ ಅಂದ್ರೆ ಬಿಜೆಪಿ (BJP) ಇಲ್ಲ. ಅಧಿಕಾರದ ದರ್ಪದಲ್ಲಿ ಬಿಜೆಪಿಯವ್ರು ಮಾತಾಡುತ್ತಿದ್ದಾರೆ ಅಷ್ಟೇ ಎಂದು ಮಾಜಿ ಸಂಸದ ಚೆಲುವರಾಯಸ್ವಾಮಿ (Chaluvarayaswamy) ತಿರುಗೇಟು ನೀಡಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ (Bharat Jodo Yatre) ಉತ್ಸಾಹದಿಂದ ಸಾಗುತ್ತಿದೆ. ಸೋನಿಯಾ ಗಾಂಧಿ (Sonia Gandhi) ಯವರು ಭಾಗವಹಿಸ್ತಿರೋದು ನಮಗೆಲ್ಲ ಹೆಮ್ಮೆ. ಅಧಿಕಾರಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವ ಗಟ್ಟಿ ಮಾಡಲು ರಾಹುಲ್ ಗಾಂಧಿ (Rahul Gandhi) ಈ ಯಾತ್ರೆ ಮಾಡುತ್ತಿದ್ದಾರೆ ಎಂದರು.
Advertisement
Advertisement
ಪಾದಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ ಸಿಕ್ತಿದೆ. ಈ ಭಾಗ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ನಂತರ ಜೆಡಿಎಸ್ ಕೋಟೆಯಾಗಿತ್ತು. ಮುಂದೆ ಜನ ಯಾರ ಕಡೆ ತೀರ್ಪು ಕೊಡ್ತಾರೆ ಅಂತ ನೋಡಿ ಎಂದು ಹೇಳಿದರು. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ
Advertisement
ಕಾಂಗ್ರೆಸ್ (Congress) ನವರು ಮೊದಲು ಜೋಡೋ ಆಗಲಿ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಬೊಮ್ಮಾಯಿ-ಶೆಟ್ಟರ್ ಜೋಡಣೆ ಆಗಿದ್ದಾರಾ..?, ಅಶೋಕ್ – ಸೋಮಣ್ಣ ಜೋಡಣೆ ಆಗಿದ್ದಾರಾ..?. ಈ ರೀತಿ ನಮ್ಮಲ್ಲಿ ಯಾವುದೇ ಸಂಘರ್ಷ ಇಲ್ಲ ಎಂದು ಮಾಜಿ ಸಂಸದರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.