ಚಂಡಿಗಢ: ಹರ್ಯಾಣ ಹಳ್ಳಿಯೊಂದರಲ್ಲಿ ಮದುವೆ ಆಗಬೇಕೆಂದರೆ ಮನೆಯಲ್ಲಿ ಶೌಚಾಯಲಯ ಹೊಂದಿರಲೇಬೇಕು. ಶೌಚಾಲಯ ಇಲ್ಲದ ಮನೆಗೆ ಹೆಣ್ಣು ಕೊಡಕೂಡದು ಎಂದು ಸಿರ್ಸಾದಲ್ಲಿರುವ ಗೊಡಿಕನ್ ಗ್ರಾಮಸ್ಥರು ಈ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರು ತಮ್ಮ ಹೆಣ್ಣು ಮಕ್ಕಳು ಬಯಲಲ್ಲಿ ಮಲ ವಿಸರ್ಜನೆ ಮಾಡುವಂತೆ ಆಗಬಾರದೆಂದು ಇಡೀ ಗ್ರಾಮವೇ ಈ ನಿರ್ಧಾರ ತೆಗೆದುಕೊಂಡಿದೆ. ನಮ್ಮೂರಿನ ಗ್ರಾಮ ಪಂಚಾಯತ್ ಕೂಡ ಹೆಣ್ಣುಮಕ್ಕಳ ಸ್ವಚ್ಛತೆಯತ್ತ ಹೆಜ್ಜೆ ಹಾಕುತ್ತಿದೆ. ಹುಡುಗಿಯರು ಬಯಲಲ್ಲಿ ಮಲ ವಿಸರ್ಜನೆಗೆ ಹೋಗುವುದು ಒಳ್ಳೆಯದಲ್ಲ. ಹಾಗಾಗಿ ನಮ್ಮ ಗ್ರಾಮಸ್ಥರು ಶೌಚಾಲಯ ಹೊಂದಿರುವವರ ಮನೆಗೆ ಮಾತ್ರ ತಮ್ಮ ಹೆಣ್ಣು ಮಕ್ಕಳನ್ನು ಕೊಡುವ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಿದ್ದಾರೆ.
Advertisement
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಅಭಿವೃದ್ಧಿ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ ಪ್ರೀತ್‍ಪಾಲ್ ಸಿಂಗ್, ಈ ಗ್ರಾಮದ ಪ್ರತಿಯೊಂದೂ ಮನೆಯಲ್ಲೂ ಶೌಚಾಲಯಗಳಿವೆ. ಬಯಲು ಮಲ ವಿಸರ್ಜನೆ ವ್ಯತಿರಿಕ್ತ ಪರಿಣಾಮ ಕುರಿತು ಜನತೆಯಲ್ಲಿ ಹಲವಾರು ಬಾರಿ ಒತ್ತಿ ಹೇಳಲಾಗಿದೆ. ಅದರಲ್ಲೂ ವಿಶೇಷವಾಗಿ ಪ್ರಧಾನಿ ನರೇದ್ರ ಮೋದಿ ಸ್ವಚ್ಛತೆ ಕುರಿತು ಹೇಳಿರುವುದು ಈ ರೀತಿಯ ಬದಲಾವಣೆಗೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
Advertisement
ದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಮಲ ವಿಸರ್ಜನೆಗೆ ಮುಕ್ತಾಯ ಹೇಳುವುದು ನಾವು ಮಹಿಳೆಯರಿಗೆ ನೀಡುವ ಅತಿದೊಡ್ಡ ಗೌರವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಫೆಬ್ರುವರಿಯಲ್ಲಿ ಬಜೆಟ್ ಮಂಡನೆ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸರ್ಕಾರ 2 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದೆ ಎಂದು ಹೇಳಿದ್ದರು.
Advertisement
2015 ರಲ್ಲಿ ಪ್ರಾರಂಭವಾದ ಸುಸ್ಥಿರ ಅಭಿವೃದ್ಧಿಯ ಗುರಿಯಲ್ಲಿ, ಪ್ರತಿಯೊಬ್ಬರೂ 2030 ರ ವೇಳೆಗೆ ಸುರಕ್ಷಿತ ಶೌಚಾಲಯವನ್ನು ಹೊಂದಿ ಸಮರ್ಪಕವಾಗಿ ನಿರ್ವಹಿಸುವಂತಾಗಬೇಕು ಎಂಬ ಗುರಿಯನ್ನು ಹೊಂದಲಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದರು.