ಲಕ್ನೋ: ಕರ್ನಾಟಕದಲ್ಲಿ ಭಾರೀ ಸದ್ದು ಮಾಡುತ್ತಿರುವ ಹಿಜಬ್ ವಿವಾದ ಇದೀಗ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಸ್ಲಿಂ ಮಹಿಳೆಯರು ಬಲವಂತವಾಗಿ ಹಿಜಬ್ ಧರಿಸುತ್ತಾರೆ. ಆದರೆ ಯಾರು ತಾವಾಗಿಯೇ ಆಯ್ಕೆ ಮಾಡಿಕೊಂಡು ಹಿಜಬ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯಾವುದೇ ಮಹಿಳೆ ತನ್ನ ಆಯ್ಕೆಯಿಂದ ಹಿಜಬ್ ಧರಿಸುವುದಿಲ್ಲ. ಎಂದಾದರೂ ಮಹಿಳೆಯರು ತಲಾಖ್ ದುಷ್ಕೃತ್ಯವನ್ನು ಆಯ್ಕೆಯಿಂದ ಒಪ್ಪಿಕೊಂಡಿದ್ದಾರೆಯೇ? ಎಂಬುವುದನ್ನು ಆ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನೇ ಕೇಳಿ ಎಂದಿದ್ದಾರೆ. ಇದನ್ನೂ ಓದಿ: ತುಪ್ಪ ಸವಿಯುವ ಮುನ್ನ ಇರಲಿ ಎಚ್ಚರ – ನಕಲಿ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ
ನಾನು ಅವರ ಕಣ್ಣೀರನ್ನು ನೋಡಿದ್ದೇನೆ. ಅವರು ತಮ್ಮ ಅಗ್ನಿಪರೀಕ್ಷೆಯ ಬಗ್ಗೆ ಮಾತನಾಡುವಾಗ, ಅವರ ಸಂಬಂಧಿಕರು ಕಣ್ಣೀರು ಸುರಿಸುತ್ತಿದ್ದರು ಎಂದು ಹೇಳಿದ್ದಾರೆ. ಇದೇ ವೇಳೆ ಜೌನ್‍ಪುರದ ಚಿಕ್ಕವಯಸ್ಸಿನ ಮಹಿಳೆಯೊಬ್ಬರು ತಲಾಖ್ ರದ್ದು ಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ನಿರ್ಮಿಸಿ – ಉದ್ಯೋಗಿಗಳ ಜೊತೆ ಚಂದ್ರಶೇಖರ್ ಮಾತು