ಲಕ್ನೋ: ಭಾರತದ ಮಹಿಳೆ ತನ್ನ ಗಂಡನನ್ನು ಬೇರೊಬ್ಬರ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತನ್ನ ಎರಡನೇ ಪತ್ನಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪವನ್ನು ಕೈಬಿಡುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್
Advertisement
Advertisement
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ವಾರಣಾಸಿ ನಿವಾಸಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ರಾಹುಲ್ ಚತುರ್ವೇದಿ, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಅವರನ್ನು ಬಿಡುಗಡೆ ಮಾಡುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದಾರೆ.
Advertisement
ಯಾವುದೇ ಭಾರತೀಯ ಮಹಿಳೆ ತನ್ನ ಪತಿಯನ್ನು ಬೇರೊಬ್ಬರೊಂದಿಗೆ ಹಂಚಿಕೊಂಡು ಸಮಚಿತ್ತದಿಂದ ಇರಲು ಸಾಧ್ಯವಿಲ್ಲ. ತನ್ನ ಪತಿ ಬೇರೆ ಮಹಿಳೆಯನ್ನು ಮದುವೆಯಾಗಲಿದ್ದಾನೆ ಎಂಬುದು ದೊಡ್ಡ ಆಘಾತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಅವರಿಂದ ಯಾವುದೇ ವಿವೇಕವನ್ನು ನಿರೀಕ್ಷಿಸುವುದು ಅಸಾಧ್ಯ ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಅಮ್ಮನ ಜೊತೆ ಮಲಗಿದ್ದವನ ಮರ್ಮಾಂಗವನ್ನೇ ಬ್ಲೇಡ್‍ನಿಂದ ಕಟ್ ಮಾಡಿದ ಮಗಳು!
Advertisement
ಈ ಪ್ರಕರಣವು ವಾರಣಾಸಿ ನಿವಾಸಿ ಸುಶೀಲ್ ಕುಮಾರ್‌ಗೆ ಸಂಬಂಧಿಸಿದ್ದಾಗಿದೆ. 2018ರ ಸೆಪ್ಟೆಂಬರ್ 22 ರಂದು ಸುಶೀಲ್ ಕುಮಾರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ಒಂದು ದಿನದ ನಂತರ ಆತನ ಎರಡನೇ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶೀಲ್ ಈ ಆರೋಪ ಎದುರಿಸುತ್ತಿದ್ದಾನೆ.
ಸುಶೀಲ್ ಕುಮಾರ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೆ ಸುಶೀಲ್ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡದೆಯೇ ಎರಡನೇ ಮದುವೆಯಾಗಿದ್ದ. ತನ್ನ ಮೊದಲ ಹೆಂಡತಿ ವಿಚಾರವನ್ನು ಎರಡನೇ ಹೆಂಡತಿಯಿಂದ ಗೌಪ್ಯವಾಗಿಟ್ಟಿದ್ದ. ಅಲ್ಲದೇ ಸುಶೀಲ್ ಮೂರನೇ ಮದುವೆಯಾಗಲು ಮುಂದಾಗಿದ್ದ. ಇದು ಎರಡನೇ ಹೆಂಡತಿಗೆ ತಿಳಿದು ಆಕೆ ತನ್ನ ಗಂಡನ ವಿರುದ್ಧ ದೂರು ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಉಷ್ಣಾಂಶ ಏರಿಕೆ – ಏಪ್ರಿಲ್‌ನಲ್ಲಿ ಎಸಿ ಸಾರ್ವಕಾಲಿಕ ಗರಿಷ್ಠ ಮಾರಾಟ
ರಹಸ್ಯವಾಗಿ ತನ್ನ ಗಂಡ ಬೇರೊಬ್ಬಳನ್ನು ಮದುವೆಯಾಗಿದ್ದಾನೆ ಎಂದು ಪತ್ನಿ ತಿಳಿದುಕೊಂಡಿದ್ದಾರೆ. ಆತ್ಮಹತ್ಯೆಗೆ ಇಷ್ಟು ಕಾರಣ ಸಾಕು ಎಂದು ಕೋರ್ಟ್ ಹೇಳಿತ್ತು.