ಬೆಂಗಳೂರು: ಅಂದುಕೊಂಡಷ್ಟು ಮಳೆಯಾಗಿಲ್ಲ. ಕೃಷಿಗೆ ಸದ್ಯಕ್ಕೆ ನೀರು ಹರಿಸುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ತಿಳಿಸಿದರು.
ವಿಧಾನಸೌಧದಲ್ಲಿ ಕೃಷ್ಣರಾಜಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 15 ದಿನದಿಂದ ಕೆಆರ್‌ಎಸ್‌ನಿಂದ (KRS) ವಿಸಿ ನಾಲೆಗೆ ನೀರು ಬಿಡಬೇಕು ಎಂಬ ಒತ್ತಡ ಇತ್ತು. ಈಗ ಅಲ್ಲಿ ನೀರು ಹೆಚ್ಚಾಗಿದೆ. ಮಾರ್ಚ್, ಏಪ್ರಿಲ್, ಮೇನಲ್ಲಿ ನೀರು ಬಿಡದಿರೋದ್ರಿಂದ ಜಾನುವಾರು ಹಾಗೂ ಪಕ್ಷಿಗಳಿಗೆ ಸಮಸ್ಯೆ ಆಗಿತ್ತು. ಹೀಗಾಗಿ ನೀರು ಬಿಡಬೇಕು ಎಂದು ಒತ್ತಾಯ ಬಂದಿತ್ತು. ಜುಲೈ 8 ರ ಸಂಜೆಯಿಂದ ವಿಸಿ ನಾಲೆಗೆ 15 ದಿನ ನೀರು ಬಿಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ಬ್ರೇಕ್
Advertisement
Advertisement
ನೀರು ಬಿಡಬೇಕು ಎಂದು ಅಲ್ಲಿನ ಶಾಸಕರು ಒತ್ತಾಯ ಮಾಡಿದ್ದರು. ಕುಡಿಯುವ ನೀರು ಹಾಗೂ ಜಾನುವಾರುಗಳಿಗಾಗಿ ಮಾತ್ರ ನೀರು ಬಿಡುತ್ತೇವೆ. ಕೃಷಿಗೆ ಸದ್ಯಕ್ಕೆ ನೀರು ಹರಿಸೋದಿಲ್ಲ. ಸದ್ಯಕ್ಕೆ ಅಂದುಕೊಂಡಷ್ಟು ಮಳೆಯಾಗಿಲ್ಲ. ಜುಲೈ ಅಂತ್ಯಕ್ಕೆ ಪೂರ್ಣ ಪ್ರಮಾಣದ ಕ್ಲಾರಿಟಿ ಸಿಗುತ್ತೆ. ನಿತ್ಯ 3,000 ಕ್ಯೂಸೆಕ್ ನೀರು ಬಿಡುವ ಚಿಂತನೆ ಇದೆ ಎಂದರು.
Advertisement
ನಾನು ಕುಮಾರಸ್ವಾಮಿ (H.D.Kumaraswamy) ಅವರಿಗೆ ಗೈಡ್ ಮಾಡುವಷ್ಟು ದೊಡ್ಡವ ಅಲ್ಲ. ರಾಜಕಾರಣ ಇಷ್ಟೊಂದು ಮಾಡೋದು ಬೇಡ. ಅವರ ಜೊತೆ ಕೂಡ ಕೆಲಸ ಮಾಡಿದ್ದೀನಿ. ನನಗೆ ಟಾಂಗ್ ಕೊಡೋಕೆ ಏನ್ ಬೇಕಾದ್ರೂ ಮಾಡಲಿ. ನಮ್ಮಪ್ಪ ಮಾಜಿ ಪ್ರಧಾನಿ ಅಲ್ಲವಲ್ಲ. ಅವರು ಕೇವಲ ಮಂಡ್ಯಗೆ ಮಾತ್ರ ಸೀಮಿತವಲ್ಲ. ಇಡೀ ದೇಶಕ್ಕೆ ಅವರು ಮಂತ್ರಿಯಾಗಿದ್ದಾರೆ. ಕಾವೇರಿ ವಿಚಾರದಲ್ಲಿ ಕರೆದ್ರೆ, ನಮ್ಮಿಂದ ಮಾಹಿತಿ ಬೇಕು ಅಂದ್ರೆ ನಾವು ಕೊಡ್ತೀವಿ. ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಿ. ಕಾವೇರಿ ವಿಚಾರದಲ್ಲಿ ಯಾವಾಗ ಕರೀತಾರೆ ಅವಾಗ ನಾನು ಹೋಗುತ್ತೇನೆ. ರಾಷ್ಟ್ರದಲ್ಲಿ ಕೈತುಂಬಾ ಕೆಲಸ ಇದ್ದಾವೆ. ಅದನ್ನ ಮಾಡೋದನ್ನ ಬಿಟ್ಟು ರಾಜಕಾರಣ ಮಾಡೋದು ಬಿಡಲಿ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿ ಸೋಲಿಸುತ್ತೇವೆ: ರಾಹುಲ್ ಗಾಂಧಿ ಶಪಥ
Advertisement
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ನಮಗೆ ಅದ್ಯಾವುದು ವಿಷ್ಯ ಗೊತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಅನ್ಯೋನ್ಯವಾಗಿದ್ದಾರೆ. ಏನೇ ಇದ್ರೂ ಸುರ್ಜೇವಾಲಾ ಕುಳಿತು ಬಗೆಹರಿಸುತ್ತಾರೆ. ಈಗ ನಮ್ಮಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಅದರ ಅವಶ್ಯಕತೆ ಇಲ್ಲ. ಪಾಪಾ.. ಕುಮಾರಸ್ವಾಮಿ ಏನೋ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಡಿಕೆ ಸಂಚು ಮಾಡ್ತಾ ಇದ್ದಾರೆಂದು. ಕೇಂದ್ರದ ಮಂತ್ರಿ ಆದ್ಮೇಲೂ ಈ ರೀತಿಯ ರಾಜಕಾರಣ ಬೇಕಾ ಅವರಿಗೆ? ಇದು ನನಗೆ ಗೊತ್ತಾಗಲ್ಲ ಎಂದು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಮುಡಾ ಹಗರಣ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಪತ್ನಿಗೆ ಜಮೀನು ಕೂಡ ಕೊಟ್ಟಿದ್ದೇ ಬಿಜೆಪಿ ಸರ್ಕಾರ ಇದ್ದಾಗ. ಕಾಂಗ್ರೆಸ್ ಸರ್ಕಾರ ಇದ್ದಾಗ ಜಮೀನು ಕೊಟ್ಟಿದ್ದಲ್ಲ. ಸಿಎಂ ಹೆಸರು ಹೇಳಿದ್ರೆ ಬಿಜೆಪಿ ಸರ್ಕಾರದಲ್ಲಿ ಮಾಡಿರೋ ಹಗರಣ ಮುಚ್ಚಿ ಹೋಗ್ತಾವೆ ಅನ್ನೋ ಕಾರಣಕ್ಕೆ ಹೇಳಿದ್ದಾರೆ ಅಂತಾ ಕಾಣುತ್ತೆ. ಮುಖ್ಯಮಂತ್ರಿ ಕುಟುಂಬದಿಂದ ಯಾವುದೇ ತಪ್ಪು ಆಗಿಲ್ಲ. ಕುಮಾರಸ್ವಾಮಿ ಕೆಲಸ ಮಾಡಲಿ. ಸಿಎಂ, ಡಿಕೆ ಮತ್ತು ಚೆಲುವರಾಯಸ್ವಾಮಿ ಬಿಟ್ಟು ಕೆಲಸ ಮಾಡಲಿ. ಒಂದೊಳ್ಳೆ ಅವಕಾಶ ಸಿಕ್ಕಿದೆ. ಕೆಲಸ ಮಾಡಲಿ ಚಾಟಿ ಬೀಸಿದರು.