ಮಂಗಳೂರು: ಮಳೆ ನಿಂತು ತಿಂಗಳು ಮುಗಿದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಉಗಮ ಸ್ಥಾನದಲ್ಲಿಯೇ ಬತ್ತಿ ಹೋಗಿದ್ದಾಳೆ. ಕುಮಾರಧಾರಾ ನದಿಯ ಹರಿವಿಗೂ ಬ್ರೇಕ್ ಬಿದ್ದಿದೆ. ಈ ನಡುವೆ ಪ್ರವಾಸಿಗರ ಪಾಲಿಗೆ ಸ್ವರ್ಗ ಅಂತಾನೇ ಕರೆಸಿಕೊಳ್ಳುವ ಚಾರ್ಮಾಡಿ ಘಾಟ್ ನಲ್ಲಿ ಫಾಲ್ಸ್ ಗಳು ದಿಢೀರ್ ಆಗಿ ಹರಿವು ನಿಲ್ಲಿಸಿವೆ.
ಸಾಮಾನ್ಯವಾಗಿ ಡಿಸೆಂಬರ್ ತನಕ ಘಾಟ್ ನ ಅಲ್ಲಲ್ಲಿ ಕಾಣಸಿಗುತ್ತಿದ್ದ ಫಾಲ್ಸ್ ಗಳು ಈ ಬಾರಿ ಸೆಪ್ಟೆಂಬರ್ ನಲ್ಲೇ ಬತ್ತಿ ಹೋಗಿದೆ. ಚಾರ್ಮಾಡಿ ಘಾಟ್ ಉದ್ದಕ್ಕೂ ಇದ್ದ ನೀರಿನ ಝರಿಗಳು ಮಳೆ ಮಾಯವಾದ ಎರಡೇ ವಾರದಲ್ಲಿ ಬತ್ತಿ ಹೋಗಿ ನಿಸ್ತೇಜವಾಗಿದ್ದು ಗಾಬರಿ ಹುಟ್ಟಿಸುವಂತಿದೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನೀರಿನ ಒರತೆಯೇ ಮುಚ್ಚಿ ಹೋಗಿದ್ದು, ಫಾಲ್ಸ್ ಗಳು ಹರಿವು ನಿಲ್ಲಿಸಲು ಕಾರಣ ಅನ್ನೋದು ಪರಿಸರ ತಜ್ಞ ದಿನೇಶ್ ಹೊಳ್ಳ ಅವರ ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕರಾವಳಿಯತ್ತ ಬರುವ ಪ್ರವಾಸಿಗರು ಚಾರ್ಮಾಡಿ ಘಾಟಿಯ ಅಂದ ಸವಿಯಲು ಬರುತ್ತಾರೆ. ಆದರೆ ಈ ಬಾರಿ ಚಾರ್ಮಾಡಿಗೆ ಬಂದರೆ ಕಲ್ಲಿನ ಗುಡ್ಡಗಳಷ್ಟೇ ನೋಡಲು ಸಿಗುತ್ತಿರೋದು ವಿಪರ್ಯಾಸ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv