ಮಲ್ಲೇಶ್ವರಂ 18ನೇ ಅಡ್ಡರಸ್ತೆ ಮೈದಾನದಲ್ಲಿ ವಾಕಿಂಗ್ ಪಥ ನಿರ್ಮಾಣ ಇಲ್ಲ: ಅಶ್ವತ್ಥನಾರಾಯಣ

Public TV
2 Min Read
aswatyh

ಬೆಂಗಳೂರು: ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಕಾಲೇಜು ಮೈದಾನದಲ್ಲಿ ವಾಕಿಂಗ್ ಪಥ ನಿರ್ಮಿಸುವುದಿಲ್ಲ. ಕಟ್ಟಡವೂ ಕಟ್ಟುವ ಉದ್ದೇಶವಿಲ್ಲ. ಬದಲಿಗೆ, ಈ ಸ್ಥಳವನ್ನು ಮತ್ತಷ್ಟು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸಿ, ಕೇವಲ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಮೀಸಲಿಡಲಾಗುವುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟವಾಗಿ ಹೇಳಿದರು.

ಈ ಸಂಬಂಧವಾಗಿ ಬುಧವಾರ ಬೆಳಗ್ಗೆ ಮೈದಾನಕ್ಕೆ ಭೇಟಿ ನೀಡಿ, ಅಲ್ಲಿದ್ದ ಕ್ರೀಡಾಪಟುಗಳು ಹಾಗೂ ವಾಯುವಿಹಾರಿಗಳ ಜೊತೆ ಮಾತನಾಡಿ, `ನಾನು ಶಾಸಕ ಆಗುವುದಕ್ಕೂ ಮೊದಲು ಈ ಮೈದಾನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗದ ಪ್ರದರ್ಶನವು ವರ್ಷದಲ್ಲಿ ಐದಾರು ತಿಂಗಳ ಕಾಲ ನಡೆಯುತ್ತಿತ್ತು. ಜೊತೆಗೆ, ಹಲವರು ಇದನ್ನು ವಾಹನ ಚಾಲನಾ ತರಬೇತಿಗೆ ಅನಧಿಕೃತವಾಗಿ ಬಳಸಿಕೊಳ್ಳುತ್ತಿದ್ದರು. ಈಗ ಇದಕ್ಕೆಲ್ಲ ಕಡಿವಾಣ ಹಾಕಿ ಕೇವಲ ಕ್ರೀಡೆಗೆ ಬಳಸುವ ಹಾಗೆ ಮಾಡಲಾಗಿದೆ ಎಂದು ವಿವರಿಸಿದರು.  ಇದನ್ನೂ ಓದಿ: ಮಿಠಾಯಿ ತಿಂದು 4 ಮಕ್ಕಳು ಸಾವು – ಪರಿಹಾರದ ಭರವಸೆ ನೀಡಿದ ಯೋಗಿ

ashwanth sarayan

`ಮೈದಾನದ ನೆಲವು ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ನಾಲ್ಕೈದು ಅಡಿಗಳಷ್ಟು ಏರುಪೇರಿನಿಂದ ಕೂಡಿದೆ. ಇದರಿಂದಾಗಿ, ಮಳೆ ಬಂದಾಗಲೆಲ್ಲ ಮೈದಾನದ ಮಧ್ಯ ಭಾಗದಲ್ಲಿ ನೀರು ನಿಂತುಕೊಂಡು ತೊಂದರೆಯಾಗುತ್ತಿದೆ. ಹೀಗಾಗಿ, ನೆಲವನ್ನು ಸಮಗೊಳಿಸಿ, ಇಲ್ಲಿ ನಿಲ್ಲುವ ನೀರು ಸ್ಯಾಂಕಿ ಕೆರೆ ಕಡೆಗೆ ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುವುದು. ಒಟ್ಟಿನಲ್ಲಿ, 1 ಕೋಟಿ ರೂ. ವೆಚ್ಚದಲ್ಲಿ ಮೈದಾನವನ್ನು ಬಳಕೆದಾರ ಸ್ನೇಹಿಯನ್ನಾಗಿ ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ನುಡಿದರು.

ಮೈದಾನದ ಮೂಲೆಯಲ್ಲಿದ್ದ ಶೌಚಾಲಯವನ್ನು ಇದುವರೆಗೆ ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಇದರ ಬದಲಿಗೆ, ಇಲ್ಲಿ ಬರುವವರಿಗೆ ನೈರ್ಮಲ್ಯದಿಂದ ಕೂಡಿರುವಂತಹ ನೂತನ ಶೌಚಾಲಯವನ್ನು ನಿರ್ಮಿಸಲಾಗುವುದು ಎಂದ ಅವರು, ಇದೇ ಸಂದರ್ಭದಲ್ಲಿ ಈ ಕಾಮಗಾರಿಗೆ ಚಾಲನೆ ನೀಡಿದರು. ಅಲ್ಲದೆ, ಬೀದಿದೀಪದ ವ್ಯವಸ್ಥೆಯನ್ನೂ ಮಾಡಲಾಗುವುದು. ಈ ಕಾಮಗಾರಿಗಳೆಲ್ಲವೂ ಕೆಲವೇ ತಿಂಗಳುಗಳಲ್ಲಿ ಮುಗಿಯಲಿವೆ ಎಂದು ಭರವಸೆ ನೀಡಿದರು.

Malleswaram 18th Cross Ground Ashwattha Narayan

ಮೈದಾನದಲ್ಲಿ ಹಿಂದೆಲ್ಲ ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದರ ಜೊತೆಗೆ ಬೇರೆಬೇರೆ ಸಮಾರಂಭಗಳು ಕೂಡ ಜರುಗುತ್ತಿದ್ದವು. ಈಗ ಇವೆಲ್ಲಕ್ಕೂ ಕಡಿವಾಣ ಹಾಕಲಾಗಿದೆ. ಇದಲ್ಲದೆ, ಪೆÇಲೀಸ್ ಠಾಣೆಯ ಎದುರಿರುವ ಮಲ್ಲೇಶ್ವರಂ ಕ್ರೀಡಾಂಗಣದಲ್ಲೂ ಈಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಸಾರ್ವಜನಿಕರ ಅಭಿಪ್ರಾಯವನ್ನು ಗೌರವಿಸುವುದಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಮುಳ್ಳು ಹಂದಿ ಚಿತ್ರದಂತೆ ಕಾಣುವ ವೈದ್ಯರ ಸಹಿ ವೈರಲ್

ಇದಾದ ಬಳಿಕ ಅವರು, ಸಂಪಿಗೆ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಯೋಜನೆಯಡಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ, ಕೆಲಸದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟು ಸೂಚನೆಗಳನ್ನು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *