– ಕಳೆದ ಎಂಟತ್ತು ತಿಂಗಳಿಂದ ಪಶು ವೈದ್ಯರ ಹುದ್ದೆ ಖಾಲಿ
ಚಾಮರಾಜನಗರ: ಜಿಲ್ಲೆ ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಅರಣ್ಯ. ಇಲ್ಲಿ ಪ್ರಾಣಿಗಳು ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಲು ಬೇರೆ ಜಿಲ್ಲೆಯ ಅಥವಾ ಬಂಡೀಪುರದ ವೈದ್ಯರ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿಯಿದೆ. ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು ಕೊಟ್ಟರೂ ಯಾರೂ ಬರುತ್ತಿಲ್ಲ.
Advertisement
ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ (BRT Tiger Reserve), ರಾಜ್ಯದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಂದಾಗಿದೆ. ಹುಲಿ, ಚಿರತೆ, ಆನೆ ಸೇರಿ ಹಲವು ಜೀವ ವೈಶಿಷ್ಟ್ಯಗಳ ತಾಣವಾಗಿದೆ. ಇಂತಹ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯದಲ್ಲೂ ಕೂಡ ಪಶು ವೈದ್ಯರ ಕೊರತೆಯಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದಲ್ಲೂ ಕೂಡ ಒಂದೊಂದು ಹುಲಿ ಸಂರಕ್ಷಿತಾರಣ್ಯದಲ್ಲಿ ಕೂಡ ವೈದ್ಯರಿರಬೇಕು ಎಂಬ ನಿಯಮವಿದೆ. ಆದರೆ, ಈ ಹುಲಿ ಸಂರಕ್ಷಿತ ಅರಣ್ಯದಲ್ಲಿ ಪಶು ವೈದ್ಯರ ಸ್ಥಾನ ಕಳೆದ ಎಂಟು ತಿಂಗಳಿಂದ ಖಾಲಿ ಇದೆ. ಇದನ್ನೂ ಓದಿ: Chamarajanagara | ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್
Advertisement
Advertisement
ಹುಲಿ ಸೇರಿ ಇತರೆ ಪ್ರಾಣಿಗಳು ಸತ್ತರೆ ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಲೇಬೇಕು. ಸ್ವಾಭಾವಿಕವಾಗಿ ಸಾವನ್ನಪ್ಪಿದೆಯಾ ಅಥವಾ ಯಾರಾದರೂ ಬೇಟೆ, ದುಷ್ಕೃತ್ಯಗಳಿಂದ ಸಾವಾಗಿದೆಯಾ ಎಂಬ ಮಾಹಿತಿ ಪಡೆಯುವುದು ಅವಶ್ಯಕವಾಗಿದೆ. ಅಲ್ಲದೇ ಪ್ರಾಣಿಗಳು ಗಾಯಗೊಂಡರೆ ಅಂತಹ ಪ್ರಾಣಿಗಳ ಮೇಲೆ ನಿಗಾ ವಹಿಸಿ ಸೂಕ್ತ ಚಿಕಿತ್ಸೆ ಕೊಡುವುದು ಅರಣ್ಯ ಇಲಾಖೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಾದರೂ ಕೂಡ ಅರಣ್ಯ ಪ್ರದೇಶಕ್ಕೆ ಪಶು ವೈದ್ಯರ ಅವಶ್ಯಕತೆಯಿದೆ.
Advertisement
ಪಶು ವೈದ್ಯರ ಹುದ್ದೆ ಖಾಲಿ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ರೆ ಈಗಾಗಲೇ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲೂ ಪಶು ವೈದ್ಯರ ನೇಮಕಾತಿಗೆ ಜಾಹೀರಾತು ಕೊಟ್ಟಿದ್ದೇವೆ. ಆದರೆ, ಇಲ್ಲಿಯವರೆಗೂ ಕೂಡ ಯಾವುದೇ ಪಶು ವೈದ್ಯರು ಕೂಡ ಬಂದಿಲ್ಲ ಎನ್ನುತ್ತಿದ್ದಾರೆ. ಇದನ್ನೂ ಓದಿ: ರಸ್ತೆ ದಾಟಿದ ಗಜಪಡೆ – ಆತಂಕಕ್ಕೆ ಒಳಗಾದ ವಾಹನ ಸವಾರರು