ನೆಲಮಂಗಲ(ಬೆಂಗಳೂರು): ಕೊರೊನಾ ಮೂರನೇ ಅಲೆಯ ನಡುವೆ ದಿನೇದಿನೇ ವ್ಯಾಕ್ಸಿನ್ ಸಮಸ್ಯೆ ಉಲ್ಬಣಗೊಂಡು ಜನರು ಸರತಿ ಸಾಲಿನಲ್ಲಿ ನಿಂತು ಕೊನೆಗೆ ವ್ಯಾಕ್ಸಿನ್ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಸಚಿವ ಎಂಟಿಬಿ ನಾಗರಾಜ್ ಅವರು ಮಾತ್ರ ಬೆಂಗಳೂರು ಗ್ರಾಮಾಂತರದಲ್ಲಿ ವ್ಯಾಕ್ಸಿನ್ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಚಿವ ಎಂಟಿಬಿ ನಾಗರಾಜು ಇಂದು ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಜನಾರ್ಶೀವಾದ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ನೆಲಮಂಗಲ ನಗರದ ವ್ಯಾಕ್ಸಿನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವ್ಯಾಕ್ಸಿನ್ ಸಮಸ್ಯೆ ಇಲ್ಲವೇ ಇಲ್ಲ ಎಂದಿದ್ದಾರೆ. ಇತ್ತ ನಮ್ಮ ಜಿಲ್ಲೆಯಲ್ಲಿ ಸಮರ್ಪಕವಾಗಿ ವ್ಯಾಕ್ಸಿನ್ ಸರಬರಾಜು ಹಾಗುತ್ತಿದೆ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.58 ವ್ಯಾಕ್ಸಿನ್ ಪೂರ್ಣಗೊಂಡಿದೆ. ಒಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ಬರುತ್ತಿದೆ. ಪ್ರತಿನಿತ್ಯ ಜನರು ಪರದಾಡುತ್ತಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಬಾರ್ ಗೊತ್ತಿಲ್ವಾ? ಯಾರೂ ಹೋಗೋದೇ ಇಲ್ವಾ- ಬಿಸಿ ಪಾಟೀಲ್ ಪ್ರಶ್ನೆ
Advertisement
Advertisement
ಇತ್ತ ಪ್ರತಿನಿತ್ಯ ಜನರು ಮೊದಲನೇ ಹಾಗೂ ಎರಡನೇ ಲಸಿಕೆ ಪಡೆಯಲು ವ್ಯಾಕ್ಸಿನ್ ಕೇಂದ್ರದ ಮುಂದೆ ಪರದಾಡಿ ವೈದ್ಯರು ಹಾಗೂ ಪೊಲೀಸರ ಜೊತೆಗೆ ಗಲಾಟೆ ಮಾಡುವ ದೃಶ್ಯಗಳನ್ನ ಸಚಿವರಿಗೆ ಅರಿವಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತೀ ಕಡಿಮೆ ವ್ಯಾಕ್ಸಿನ್ ನೆಲಮಂಗಲ ತಾಲೂಕಿಗೆ ಸರಬರಾಜು ಹಾಗಿದ್ದು ಅಧಿಕಾರಿಗಳ ಸಹ ಸರಿಯಾದ ಮಾಹಿತಿಯನ್ನ ಸಚಿವರಿಗೆ ನೀಡಿಲ್ವ ಎಂಬುದು ಸಾಬೀತಾಗಿದೆ. ನಂತರ ಕೂಡಲೇ ಸಮರ್ಪಕವಾಗಿ ಲಸಿಕೆ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: 83 ತಾಲೂಕುಗಳು ಪ್ರವಾಹಪೀಡಿತ ಎಂದು ಘೋಷಣೆ: ಆರ್.ಅಶೋಕ್