ಕಾಬೂಲ್: ಪುರುಷ ಸಂಬಂಧಿಗಳು ಜೊತೆಯಲ್ಲಿಲ್ಲದಿದ್ದರೆ ಮಹಿಳೆಯರು ಪ್ರವಾಸ ಕೈಗೊಳ್ಳುವಂತಿಲ್ಲ ಎಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆದೇಶ ಹೊರಡಿಸಿದೆ.
ಬುರ್ಕಾ ಧರಿಸಿರುವ ಮಹಿಳೆಯರು ವಾಹನಗಳಲ್ಲಿ ಪ್ರಯಾಣಿಸಬಹುದು. ಬುರ್ಕಾ ಧರಿಸದವರನ್ನು ವಾಹನಗಳಲ್ಲಿ ಕೂರಿಸಿಕೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಾಲಿಬಾನ್ ತಿಳಿಸಿದೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!
Advertisement
Advertisement
ಪುರುಷ ಸಂಬಂಧಿಗಳು 72 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸುವ ಮಹಿಳೆಯರ ಜೊತೆಯಲ್ಲಿ ಕುಟುಂಬದ ಸದಸ್ಯರಿರಬೇಕು. ಇಲ್ಲದಿದ್ದರೆ ಅಂತಹವರಿಗೆ ಪ್ರವಾಸ ನಿಷಿದ್ಧ ಎಂದು ತಾಲಿಬಾನ್ ಸಚಿವಾಲಯದ ವಕ್ತಾರ ಸಾದಿಕ್ ಅಕಿಫ್ ಮುಹಜಿರ್ ತಿಳಿಸಿದ್ದಾರೆ.
Advertisement
ಈ ಮಾರ್ಗಸೂಚಿಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನಟಿಯರನ್ನು ಒಳಗೊಂಡ ನಾಟಕಗಳು ಮತ್ತು ಸೋಪ್ ಜಾಹೀರಾತುಗಳನ್ನು ನಿಲ್ಲಿಸುವಂತೆ ಸಚಿವಾಲಯವು ದೂದರ್ಶನ ಚಾನೆಲ್‌ಗಳಿಗೆ ಸೂಚನೆ ನೀಡಿದ ಕೆಲ ದಿನಗಳಲ್ಲೇ ಈ ಮಾರ್ಗಸೂಚಿ ಹೊರಡಿಸಿದೆ. ಇದನ್ನೂ ಓದಿ: ಅಂಕಲ್ ಅಂದಿದ್ದೇ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ
Advertisement
ಮಹಿಳಾ ಪತ್ರಕರ್ತರು ದೂರದರ್ಶನದಲ್ಲಿ ಸುದ್ದಿಗಳನ್ನು ವಾಚಿಸುವಾಗ ಕಡ್ಡಾಯವಾಗಿ ಬುರ್ಕಾ ಧರಿಸಬೇಕು ಎಂದು ಖಡಕ್ ಸೂಚನೆ ನೀಡಿದೆ. ವಾಹನಗಳಲ್ಲಿ ಯಾರೂ ಸಹ ಹಾಡುಗಳನ್ನು ಹಾಕಬಾರದು. ಸಾರಿಗೆ ವ್ಯವಸ್ಥೆ ಬಯಸುವ ಮಹಿಳೆಯರು ಬುರ್ಕಾ ಧರಿಸಬೇಕು ಎಂದು ತಿಳಿಸಿದೆ.