ಬೆಳಗಾವಿ: ಸದ್ಯ ನಾನು ದೆಹಲಿಗೆ (Delhi) ಹೋಗುವುದಿಲ್ಲ ಇಲ್ಲೇ ಇರುತ್ತೇನೆ. ಅವಶ್ಯಕತೆ ಬಂದಾಗ ದೆಹಲಿಗೆ ಹೋಗುತ್ತೇನೆ ಎಂದು ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸ್ಪಷ್ಟಪಡಿಸಿದ್ದಾರೆ.
ದೆಹಲಿಗೆ ತೆರಳಲಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ಸದ್ಯಕ್ಕೆ ದೆಹಲಿ ಪ್ರವಾಸವಿಲ್ಲ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ, ಚರ್ಚೆ ನಡೆದಾಗ ನೋಡೋಣ. ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಡಿಕೆ ಶಿವಕುಮಾರ್ (DK Shivakumar) ಮತ್ತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭೇಟಿ ಬಗ್ಗೆಯೂ ಮಾಹಿತಿಯಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ಮುಂದೆ ಸಂಪುಟ ಪುನಾರಚನೆ ಕ್ಲೈಮ್ – ಸಿದ್ದರಾಮಯ್ಯ ಕೊಟ್ಟ ಸುಳಿವು ಏನು?
ಬಿಹಾರಿ ಸಮುದಾಯದ ಕಾರ್ಯಕ್ರಮದಲ್ಲಿ ಮುಂದಿನ ಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದರಲ್ಲಿ ಅಂಥದೇನೂ ಮಹತ್ವವಿಲ್ಲ ಅವರವರ ಅಭಿಮಾನಿಗಳು ಹೇಳುತ್ತಾರೆ ಹಾಗೆ ಹೇಳಿರಬಹದು ಎಂದಿದ್ದಾರೆ.
ಕಬ್ಬಿನ ಬೆಲೆ ನಿಗದಿಗೆ 5ನೇ ದಿನಕ್ಕೆ ರೈತರ ಅಹೋರಾತ್ರಿ ಧರಣಿ ಕಾಲಿಟ್ಟಿರುವ ಕುರಿತು ಮಾತನಾಡಿ, ಕಾರ್ಖಾನೆ ಪರವಾಗಿ ಡಿಸಿ ಜೊತೆ ಮಾತನಾಡಲು ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ಚರ್ಚೆ ನಡೆಸುತ್ತಿದ್ದು ಇನ್ನೂ ಅಂತಿಮವಾಗಿಲ್ಲ. ಬೇಗ ನಿರ್ಣಯ ಮಾಡುವಂತೆ ಸೂಚನೆ ನೀಡಿದ್ದೇನೆ. ಸರಕಾರದ ಗಮನ ಸೆಳೆಯಲು ಹೋರಾಟ ನಡೆಯುತ್ತಿದೆ. ಸರಕಾರದ ಇದೆ ಮುಂದೆ ನೋಡೋಣ ಎಂದು ತಿಳಿಸಿದರು.
ಹಿರೇಕೋಡಿ ಮೊರಾರ್ಜಿ ವಸತಿ ಶಾಲೆಯಲ್ಲಿ ಎರಡನೇ ಬಾರಿಗೆ ಫುಡ್ ಪಾಯಿಸನ್ ವಿಚಾರ ಒಳಗಿನವ ನೌಕರರ ಸಮಸ್ಯೆಯಿಂದ ಹೀಗೆ ಆಗುತ್ತಿದೆ. ಉದ್ದೇಶಪೂರ್ವಕವಾಗಿ ವಿಷ ಬೆರೆಸುತ್ತಿರುವ ಶಂಕೆ ಇದೆ. ಈ ಕುರಿತು ಪೊಲೀಸರಿಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

