ನೆಲಮಂಗಲ: ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡುವುದನ್ನು ವಾಪಸ್ ಪಡೆಯಲಾಗಿದೆ.
ಜುಲೈ 1 ರಿಂದ ಶುಲ್ಕ ಹೆಚ್ಚಳ ಮಾಡಿವುದಗಿ ನೈಸ್ ಟೋಲ್ ಕಂಪನಿ ಹೇಳಿತ್ತು. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರಿಗಿನ ನೈಸ್ ಟೋಲ್ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆಯ ಟೋಲ್ ಗೆ ಅನುಗುಣವಾಗಿ ಟೋಲ್ ಶುಲ್ಕ ಹೆಚ್ಚಿಳ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಕಾರಣದಿಂದ ಶುಲ್ಕ ಏರಿಕೆಯನ್ನ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
Advertisement
Advertisement
ಈ ಮೂಲಕ ಹೊಸ ದರ ಪಟ್ಟಿಯನ್ನು ನೈಸ್ ಸಂಸ್ಥೆ ತಾತ್ಕಾಲಿಕವಾಗಿ ತಡೆಹಿಡಿದಿದ್ದು, ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಮುಂದಿನ ವಾರದಲ್ಲಿ ಮತ್ತೆ ಏರಿಕೆ ಸಾಧ್ಯತೆ ಇದೆ. ಇದನ್ನೂ ಓದಿ: ಅಧಿಕಾರಕ್ಕಾಗಿ ಶಿವಸೇನೆ ಹುಟ್ಟಿಲ್ಲ, ಶಿವಸೇನೆಗಾಗಿ ಅಧಿಕಾರ ಹುಟ್ಟಿದೆ: ಸಂಜಯ್ ರಾವತ್
Advertisement
ಟೋಲ್ ದರ:
ಹೊಸೂರು ಟು ಬನ್ನೇರುಘಟ್ಟ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 125, ಟ್ರಕ್: 85, ಎಲ್ಸಿವಿ: 45, ಎಂಎವಿ: 90 ರೂ.
Advertisement
ಬನ್ನೇರುಘಟ್ಟ ಟು ಕನಕಪುರ ರಸ್ತೆ: ದ್ವಿಚಕ್ರ: 12, ಕಾರು: 35, ಬಸ್: 100, ಟ್ರಕ್: 65, ಎಲ್ಸಿವಿ: 35, ಎಂಎವಿ: 70 ರೂ.
ಕನಕಪುರ ರಸ್ತೆ ಟು CLOVER LEAF: ದ್ವಿಚಕ್ರ: 8, ಕಾರು: 25, ಬಸ್: 65, ಟ್ರಕ್: 40, ಎಲ್ಸಿವಿ: 25, ಎಂಎವಿ: 40 ರೂ.
ಕ್ಲವರ್ ಲೀಫ್ ಟು ಮೈಸೂರು ರಸ್ತೆ: ದ್ವಿಚಕ್ರ: 8, ಕಾರು: 20, ಬಸ್: 55, ಟ್ರಕ್: 35, ಎಲ್ಸಿವಿ: 25, ಎಂಎವಿ: 40 ರೂ.
ಮೈಸೂರು ರಸ್ತೆ ಟು ಮಾಗಡಿ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 135, ಟ್ರಕ್: 90, ಎಲ್ಸಿವಿ: 55, ಎಂಎವಿ: 95 ರೂ.
ಮಾಗಡಿ ರಸ್ತೆ ಟು ತುಮಕೂರು ರಸ್ತೆ: ದ್ವಿಚಕ್ರ: 12, ಕಾರು: 40, ಬಸ್: 105, ಟ್ರಕ್: 70, ಎಲ್ಸಿವಿ: 40, ಎಂಎವಿ: 75 ರೂ.
ಲಿಂಕ್ ರಸ್ತೆ: ದ್ವಿಚಕ್ರ: 18, ಕಾರು: 50, ಬಸ್: 130, ಟ್ರಕ್: 90, ಎಲ್ಸಿವಿ: 50, ಎಂಎವಿ: 105 ರೂ.