ಮಾಸ್ಕೊ: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ವಿರೋಧಿಸಿ ರಷ್ಯಾದ ಟಿವಿ ಚಾನೆಲ್‌ವೊಂದರ ಎಲ್ಲಾ ಸಿಬ್ಬಂದಿ ನೇರ ಪ್ರಸಾರದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ʼಯುದ್ಧ ಬೇಡʼ ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಕೊನೆಯದಾಗಿ ಪ್ರಸಾರ ಮಾಡಿ ಎಲ್ಲರೂ ಲೈವ್‌ನಲ್ಲೇ ರಾಜೀನಾಮೆ ನೀಡಿ ಕಚೇರಿಯಿಂದ ಹೊರನಡೆದಿದ್ದಾರೆ. ಉಕ್ರೇನ್ ವಿರುದ್ಧದ ರಷ್ಯಾ ಯುದ್ಧವನ್ನು ಪ್ರಸಾರ ಮಾಡದಂತೆ ರಷ್ಯಾ ಅಧಿಕಾರಿಗಳು ಸ್ಥಗಿತಗೊಳಿಸಿದ್ದರಿಂದ ಸಿಬ್ಬಂದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ: ಉಕ್ರೇನ್‍ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿ
Advertisement
Advertisement
ಸುದ್ದಿ ವಾಹಿನಿಯ ಸಂಸ್ಥಾಪಕ ನಟಾಲಿಯಾ ಸಿಂಡೇವಾ ಈ ಕುರಿತು ಪ್ರತಿಕ್ರಿಯಿಸಿದ್ದು, ʼಯುದ್ಧ ಬೇಡʼ ಎಂಬ ಸುದ್ದಿಯನ್ನು ಕೊನೆಯದಾಗಿ ಪ್ರಸಾರ ಮಾಡಿ ಎಲ್ಲಾ ಸಿಬ್ಬಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅನಿರ್ದಿಷ್ಟಾವಧಿವರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Advertisement
https://twitter.com/AfricaUnitNow/status/1499552939232403456
Advertisement
ಸ್ವತಂತ್ರ ಸುದ್ದಿವಾಹಿನಿಗಳನ್ನು ನಿರ್ಬಂಧಿಸುವ ಮೂಲಕ ಮತ್ತು ಉಕ್ರೇನ್ ಆಕ್ರಮಣದ ಸುದ್ದಿಯನ್ನು ರಷ್ಯನ್ನರು ಕೇಳದಂತೆ ತಡೆಯುವ ಮೂಲಕ ರಷ್ಯಾವು ʼಮಾಧ್ಯಮ ಸ್ವಾತಂತ್ರ್ಯ ಮತ್ತು ಸತ್ಯದ ಮೇಲೆ ಯುದ್ಧʼ ಪ್ರಾರಂಭಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಬುಧವಾರ ಆರೋಪಿಸಿತ್ತು. ಇದನ್ನೂ ಓದಿ: ರಷ್ಯಾ ಯುದ್ಧ ಇಡೀ ಯೂರೋಪ್ ಭದ್ರತೆಗೆ ಪೆಟ್ಟು ನೀಡಿದೆ: ಬ್ರಿಟಿಷ್ ಪ್ರಧಾನಿ ಕಳವಳ
ರಷ್ಯಾದ ನಾಗರಿಕರು ಮಾಹಿತಿ ಮತ್ತು ಅಭಿಪ್ರಾಯಗಳನ್ನು ಪಡೆಯಲು ಅವಲಂಬಿಸಿರುವ ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ವೇದಿಕೆಗಳನ್ನು ಸಹ ರಷ್ಯಾ ಸರ್ಕಾರ ತಡೆಯುತ್ತಿದೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.