ಬೆಂಗಳೂರು: ಧರ್ಮಸ್ಥಳ ಕೇಸ್‌ಲ್ಲಿ ಎಸ್‌ಐಟಿ (SIT) ತನಿಖೆ ಪೂರ್ಣ ಮಾಡಲು ಸಮಯ ನಿಗದಿ ಮಾಡಿಲ್ಲ. ಎಸ್‌ಐಟಿ ತನಿಖೆ ನಡೆಸುವಾಗಲೇ ಎನ್‌ಐಎ (NIA) ತನಿಖೆಯೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ತನಿಖೆ ತ್ವರಿತವಾಗಿ ಆಗಬೇಕು ಎಂದು ಹೇಳಿದ್ರೆ ಎಸ್‌ಐಟಿ ಅವರಿಗೆ ಅವರದ್ದೇ ಆದ ತೀರ್ಮಾನ ಇರುತ್ತದೆ. ಎಸ್‌ಐಟಿ ಅವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯೋವರೆಗೂ ಅವರು ಯಾವ ವಿಚಾರಗಳನ್ನು ಹೇಳುವ ಹಾಗೇ ಇಲ್ಲ. ನಾವು ಹೇಳೋ ಹಾಗೇ ಇಲ್ಲ. ತನಿಖೆ ತ್ವರಿತವಾಗಿ ಆಗಲಿ ಅಂತ ಹೇಳಬಹುದು. ಎಸ್‌ಐಟಿಗೆ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟಿದ್ದೇವೆ ಅದನ್ನ ಮಾಡ್ತಾರೆ. ಅದರಲ್ಲಿ ಅವರಿಗೆ ಬೇರೆ ಬೇರೆ ಮಾಹಿತಿ ಸಿಗುವ ಹಾಗಿದ್ದರೆ ಅವರೇ ತನಿಖೆ ಮಾಡಿಕೊಳ್ತಾರೆ. ಅದಕ್ಕೆ ನಾವು ಯಾವುದೇ ಡೈರೆಕ್ಷನ್ಸ್ ಕೊಡೋದಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ 7 ಮಂದಿ ಸೇರಿ 11 ಜನ ದುರ್ಮರಣ
ಸೌಜನ್ಯ ತಾಯಿ ಕೊಟ್ಟಿರುವ ದೂರು ತನಿಖೆ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನ ಎಸ್‌ಐಟಿ ಅವರು ಡಿಸೈಡ್ ಮಾಡ್ತಾರೆ. ಇದಕ್ಕೂ ಅದಕ್ಕೂ ಲಿಂಕ್ ಇದೆಯಾ? ಇಲ್ಲವಾ? ಹಾಗೂ ತನಿಖೆ ಮಾಡಬೇಕಾ? ಬೇಡವಾ? ಅಂತ ಎಸ್‌ಐಟಿ ನಿರ್ಧರಿಸಿ ತನಿಖೆ ಮಾಡುತ್ತದೆ. ನಾವು ಅದನ್ನ ಹೇಳೋಕೆ ಸಾಧ್ಯವಿಲ್ಲ. ಧರ್ಮಸ್ಥಳ ಕೇಸ್ (Dharmasthala Case) ತನಿಖೆ ಇಷ್ಟೇ ದಿನದಲ್ಲಿ ಮಾಡಿ ಅಂತ ಹೇಳಿಲ್ಲ. ಆದಷ್ಟೂ ಬೇಗ ತನಿಖೆ ಮಾಡಿ ಅಂತ ಹೇಳಿದ್ದೇವೆ. ಸಮಯ ನಿಗದಿ ಮಾಡೋಕೆ ಆಗೋದೇ ಇಲ್ಲ. ತನಿಖೆ ಹೇಗೆ ಹೋಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಬೇಗ ಮುಗಿದರೆ ಬೇಗ ವರದಿ ಕೊಡ್ತಾರೆ. ತನಿಖೆ ಪೂರ್ತಿ ಮುಗಿಯುವವರೆಗೂ ಅವರು ತನಿಖೆ ಮಾಡುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್‌ನಿಂದ ಧರ್ಮಸ್ಥಳ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆ ಹೀಗೆ ಆಗುತ್ತೆ, ಆಗಬೇಕು, ನಾಳೆ ತನಿಖೆ ಮುಗಿಸಿ ಕೊಡಿ ಎಂದು ಹೇಳೋಕೆ ಆಗಲ್ಲ. ಯಾವುದೇ ತನಿಖೆಯಾದರೂ ಕೂಡ ನಾವು ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ರಾಜಕೀಯಕ್ಕೆ ತಿರುಗಿದರೂ ಕೂಡ ನಾವು ಎಸ್‌ಐಟಿ ಅವರಿಗೆ ಮುಂದಿನ ವಾರ ಮುಗಿಸಿ, ವರದಿ ಕೊಡಿ ಎಂದು ಹೇಳೋಕಾಗಲ್ಲ ಎಂದಿದ್ದಾರೆ.
ಎನ್‌ಐಎ ತನಿಖೆಗೆ ಕೊಡಿ ಎಂಬ ವಿಪಕ್ಷಗಳ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ತನಿಖೆಗೆ ಕೊಡಬೇಕಾದರೂ ಈಗ ಇಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯೋ ಬಗ್ಗೆ ಯಾರದ್ದು ತಕರಾರಿಲ್ಲ. ಎಸ್‌ಐಟಿ ತನಿಖೆ ಎಲ್ಲರೂ ಸ್ವಾಗತ ಮಾಡಿದ್ದಾರೆ. ಧರ್ಮಸ್ಥಳದ ಹೆಗ್ಗಡೆ ಅವರು ತನಿಖೆ ಸ್ವಾಗತ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ ಈ ಸಮಯದಲ್ಲಿ ಬೇರೆ ಏಜೆನ್ಸಿಯಿಂದ ತನಿಖೆ ಆಗತ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಎನ್‌ಐಎ ತನಿಖೆಗೆ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಈವರೆಗೂ ಪ್ರಕರಣದಲ್ಲಿ ಯಾರನ್ನು ಬಂಧಿಸದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆಗಳು ನಾನು, ನೀವು, ಬೇರೆಯವರು ಹೇಳಿದ ಹಾಗೆ ನಡೆಯುವುದಿಲ್ಲ. ಎಸ್‌ಐಟಿ ಅವರಿಗೆ ಅವರದ್ದೇ ಆದ ತನಿಖೆಯ ಕ್ರಮಗಳಿವೆ. ಅದನ್ನ ಅವರು ಮಾಡಿಕೊಳ್ತಾರೆ. ಸ್ಯಾಂಪಲ್ ತಂದು ಎಫ್‌ಎಸ್‌ಎಲ್‌ಗೆ ಕೊಟ್ಟಿದ್ದಾರೆ. ಅದರ ಮಾಹಿತಿ ಪಡೆಯಬೇಕು. ಅದರ ರಿಪೋರ್ಟ್ ಬರಬೇಕು. ಅದರ ಮೇಲೆ ಏನೇನು ಇರುತ್ತದೆ ಗೊತ್ತಿಲ್ಲ ಎಂದರು. ಇನ್ನೂ ದ್ವಾರಕನಾಥ್ ಎನ್‌ಐಎ, ಸಿಬಿಐಗೆ ಕೊಟ್ಟರೆ ಕೇಸ್ ಮುಚ್ಚಿ ಹೋಗುತ್ತದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲರ ಹೇಳಿಕೆಗೆ ನಾನು ಪ್ರತಿಕ್ರಿಯೆ ಮಾಡುವುದಿಲ್ಲ ಎಂದಿದ್ದಾರೆ.ಇದನ್ನೂ ಓದಿ: ದೆಹಲಿಯ ಕಲ್ಕಾಜಿ ದೇಗುಲದಲ್ಲಿ ಪ್ರಸಾದ ವಿಚಾರಕ್ಕೆ ಗಲಾಟೆ – 15 ವರ್ಷಗಳಿಂದ ಸೇವಕನಾಗಿದ್ದ ವ್ಯಕ್ತಿಯ ಹತ್ಯೆ