– ನಾನು ಮುಸ್ಲಿಮರು, ಕ್ರೈಸ್ತ ವಿರೋಧಿಯಲ್ಲ
ಮಡಿಕೇರಿ: ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದವರಿಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪುತ್ತಿದೆ ಎಂಬ ಭಾವನೆ ಬಲವಾಗುತ್ತಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್ (K.Raghupati Bhat) ಹೇಳಿದರು.
ಮಡಿಕೇರಿಯಲ್ಲಿ ಮಾತನಾಡಿದ ಅವರು, ನನಗೆ ಪಕ್ಷದಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ವಿವರವಾದ ಉತ್ತರ ಕೊಡುವೆ. ಮಾತ್ರವಲ್ಲ, ಪಕ್ಷದ ಶಿಸ್ತು ಸಮಿತಿ ವಿಚಾರಣೆಗೆ ಕರೆದರೆ ಹಾಜರಾಗಿ ವಿವರಣೆ ಕೊಡುವೆ ಎಂದು ತಿಳಿಸಿದರು. ಇದನ್ನೂ ಓದಿ: 24 ಗಂಟೆಯೊಳಗೆ ಚುನಾವಣಾ ಕಣದಿಂದ ನಿವೃತ್ತರಾಗಿ: ರಘುಪತಿ ಭಟ್‍ಗೆ ಸುನಿಲ್ ಕುಮಾರ್ ಎಚ್ಚರಿಕೆ
ನನಗೆ ಏಕೆ ಎರಡು ಬಾರಿ ಟಿಕೆಟ್ ಕೊಡಲಿಲ್ಲ ಎಂಬುದು ಗೊತ್ತಿಲ್ಲ. ಯಾರು ಟಿಕೆಟ್ ತಪ್ಪಿಸಿದರು ಎಂಬುದೂ ಗೊತ್ತಿಲ್ಲ. ಆದರೆ ಯಾರೋ ನಾಯಕರು ತಪ್ಪಿಸಿದ್ದಂತೂ ಹೌದು ಎಂದರು.
ಹಿಜಬ್ ವಿಷಯವನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಕೆಲವು ಹೆಣ್ಣುಮಕ್ಕಳನ್ನು ಕೆಲವೊಂದು ಸಂಘಟನೆಗಳು ದಾರಿ ತಪ್ಪಿಸಿದರು. ನಾನು ಮುಸ್ಲಿಮರು ಮತ್ತು ಕ್ರೈಸ್ತರ ವಿರೋಧಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಬುರ್ಖಾಧಾರಿ ಮಹಿಳಾ ಮತದಾರರ ವಿಶೇಷ ತಪಾಸಣೆಗೆ ಒತ್ತಾಯ – ಬಿಜೆಪಿ ಮನವಿಗೆ ಓವೈಸಿ ಕೆಂಡಾಮಂಡಲ
ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಸಾರಿರುವ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಜಿಲ್ಲಾ ಬಿಜೆಪಿ ರಾಜ್ಯ ಸಮಿತಿಗೆ ಗುರುವಾರ ಶಿಫಾರಸು ಮಾಡಲಾಗಿತ್ತು.