ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಮಕ್ಕಳಿಗೆ ಟಿಕೆಟ್ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.
ಮಕ್ಕಳು, ಸಂಬಂಧಿಕರಿಗೆಲ್ಲಾ ಟಿಕೆಟ್ ಇಲ್ಲ. ಸರ್ವೇ ವರದಿ, ಗುಪ್ತ ವರದಿ ಆಧರಿಸಿಯೇ ಟಿಕೆಟ್ ನೀಡಲಾಗುವುದು. ಹಾಗಾಗಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಹಾಲಿ ಶಾಸಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರಿಗೆ ಮಾತ್ರ ಟಿಕೆಟ್ ನೀಡಲಾಗುತ್ತಿದೆ ಎನ್ನಲಾಗಿದೆ.
Advertisement
ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡುವುದರಿಂದ ಶಿಕಾರಿಪುರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಟಿಕೆಟ್ ಸಿಗಬಹುದು ಎಂದು ಹೇಳಲಾಗಿದೆ.
Advertisement
* ಯಾವ ಕ್ಷೇತ್ರದಲ್ಲಿ ಯಾರು ಟಿಕೆಟ್ ಕೇಳ್ತಿದ್ದಾರೆ..?
1. ಬಿ.ವೈ. ರಾಘವೇಂದ್ರ, ಹಾಲಿ ಶಾಸಕ, ಬಿಎಸ್ ವೈ ಪುತ್ರ- ಶಿಕಾರಿಪುರ ಕ್ಷೇತ್ರ
2. ಕಾಂತೇಶ್, ಈಶ್ವರಪ್ಪ ಪುತ್ರ- ಶಿವಮೊಗ್ಗ ಗ್ರಾಮೀಣ ಕ್ಷೇತ್ರ
3. ಶಿವಕುಮಾರ್ ಉದಾಸಿ, ಹಾಲಿ ಎಂಪಿ, ಸಿ.ಎಂ.ಉದಾಸಿ ಪುತ್ರ- ರಾಣೆಬೆನ್ನೂರು, ಹಾನಗಲ್ ಕ್ಷೇತ್ರ
4. ಸಪ್ತಗಿರಿಗೌಡ, ರಾಮಚಂದ್ರೇಗೌಡರ ಪುತ್ರ- ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ
5. ಜ್ಯೋತಿ ಗಣೇಶ್, ಮಾಜಿ ಎಂಪಿ ಜಿ.ಎಸ್.ಬಸವರಾಜ್ ಪುತ್ರ- ತುಮಕೂರು ನಗರ
6. ಪೂರ್ಣಿಮಾ, ದಿವಂಗತ ಕೃಷ್ಣಪ್ಪ ಪುತ್ರಿ- ಕೆ.ಆರ್.ಪುರಂ ಕ್ಷೇತ್ರ
7. ನಂದೀಶ್ ಪ್ರೀತಂ, ದಿವಂಗತ ಶಂಕರಲಿಂಗೇಗೌಡ ಪುತ್ರ- ಚಾಮರಾಜ ಕ್ಷೇತ್ರ
Advertisement
ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿಯನ್ನು ತನ್ನ ಮುಷ್ಠಿಗೆ ತೆಗೆದುಕೊಳ್ಳುತ್ತಿದೆ. ಇನ್ನು ಯಾವ ನಾಯಕರಿಗೆ ಮತ್ತು ಯಾವ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.