ಬೆಂಗಳೂರು: ತೆರಿಗೆ ಪಾವತಿ ಮಾಡುವವರು ಯಾರೂ ನಮಗೆ ಗೃಹಲಕ್ಷ್ಮಿ ಬೇಕು ಅಂತ ಕೇಳುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗೃಹಲಕ್ಷ್ಮಿ (Guidlines For Gruhalakshmi) ಗೆ ಕಂಡಿಷನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಾವು ಸರ್ಕಾರ ನಾವು ತೀರ್ಮಾನ ಮಾಡುವುದಾಗಿ ಹೊಸ ವರಸೆ ತೆಗೆದರು.
Advertisement
ಒಬ್ಬರಿಗೆ ಒಂದು ರೂಪಾಯಿ ಕೊಡಬೇಕಾದ್ರೆ ಅಕೌಂಟ್ ಇರಬೇಕು. ವೋಟರ್ ಐಡಿ (Voter ID), ಆಧಾರ್ ಕಾರ್ಡ್ (Adhar Card) ಇರಬೇಕು. ಅವರದ್ದೇ ಬ್ಯಾಂಕ್ ಅಕೌಂಟ್ ಇರಬೇಕು. ನಮ್ಮ ಬಳಿ ಎಲ್ಲಾ ದಾಖಲೆ ಇದೆ. ಮನೆ ಯಜಮಾನಿ ಅವರೇ ತೀರ್ಮಾನ ಮಾಡಬೇಕು. ಟ್ಯಾಕ್ಸ್ ಕೊಟ್ಟೋರು ಯಾರೂ ಗೃಹಲಕ್ಷ್ಮಿ ಬೇಕು ಅಂತ ಕೇಳ್ತಿಲ್ಲ. ನನಗೆ ಅನೇಕ ಜನ ಪತ್ರ ಬರೆದಿದ್ದಾರೆ. ಅದೆಲ್ಲವನ್ನೂ ಹೇಳೋಕೆ ಆಗುತ್ತಾ? ಟ್ಯಾಕ್ಸ್ ಕಟ್ಟೋರು ಯಾರೂ ಬಂದು ಕೇಳಲ್ಲ ಎಂದರು.
Advertisement
Advertisement
ಮನೆ, ಸಂಸಾರ ಯಾರು ನಡೆಸುತ್ತಾರೆ ಅಂತ ಅವರ ಹೇಳಬೇಕು. ಅವರ ಮನೆ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ. ಒಂದು ಮನೆಗೆ ಒಂದು. ವೋಟರ್ ಲಿಸ್ಟ್ ನಲ್ಲಿ ಯಾರ ಮನೆ ಇದೆ ಅನ್ನೋ ಲೆಕ್ಕ ಇದೆ. ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಎಲ್ಲಾ ಲೆಕ್ಕ ಇದೆ. ಫಸ್ಟ್ ನೇಮ್ ಕೊಡಬೇಕಾ, ಸೆಕೆಂಡ್ ನೇಮ್ ಕೋಡಬೇಕಾ? ಹೆಣ್ಣುಮಕ್ಕಳು ತೀರ್ಮಾನ ಮಾಡಬೇಕು ಎಂದರು. ಇದನ್ನೂ ಓದಿ: ಶ್ರೀಲಂಕಾ, ಪಾಕಿಸ್ತಾನ ರೀತಿಯ ಪರಿಸ್ಥಿತಿ ಕರ್ನಾಟಕಕ್ಕೆ ಬರಬಾರದು: ಪ್ರತಾಪ್ ಸಿಂಹ
Advertisement
ಗ್ಯಾರಂಟಿ ಘೋಷಣೆ ಮಾಡೋವಾಗ ಕಂಡಿಷನ್ ಇರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸರ್ಕಾರ. ಸರ್ಕಾರ ನಡೆಸೋದು. ನಾವ್ ಏನ್ ಕೊಡಬೇಕು ಅಂತ ನಾವು ಹೇಳಿದ್ದೇವೆ. ಜನ ಕೇಳಿದ್ದಾರೆ. ಬಾಡಿಗೆ ಮನೆ ವಿಚಾರ ಬಂತು ಅದನ್ನ ಕ್ಲಿಯರ್ ಮಾಡಿದ್ದೇವೆ. ಬಾಡಿಗೆ ಮನೆ ಇದ್ದವರಿಗೂ ವಿದ್ಯುತ್ ಕೊಡ್ತೀವಿ. ಐಟಿ ಕಟ್ಟೋರು ಯಾರು ನಮಗೆ ಬೇಕು ಅಂತ ಕೇಳಿಲ್ಲ ಎಂದರು. ಇದೇ ವೇಳೆ ಸರ್ಕಾರಿ ನೌಕರರಿಗೆ ಗ್ಯಾರಂಟಿ ಅನ್ವಯ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಮಗೆ ಅವೆಲ್ಲ ಗೊತ್ತಿದೆ ಬಿಡಿ ಎಂದು ಹೋದರು.