ಬೆಂಗಳೂರು: ಕೇಂದ್ರ ಸರ್ಕಾರದ ರೈತ ಮಸೂದೆ ವಿರೋಧಿಸಿ ರೈತರು ಕರೆ ಕೊಟ್ಟಿರುವ ಭಾರತ್ ಬಂದ್ ಬೆಂಗಳೂರಿನಲ್ಲೂ ಯಶಸ್ವಿಗೊಳಿಸಲು ನಗರದ ರೈತ ಸಂಘ ಮುಂದಾಗಿದೆ. ಈ ನಡುವೆ ರಾಜ್ಯದಲ್ಲಿ ಬಂದ್ ಇದ್ದರೂ ಕೂಡ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ಕೆಎಸ್ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ ತಿಳಿಸಿದ್ದಾರೆ.
Advertisement
ಭಾರತ್ ಬಂದ್ ದಿನ ಸಾರಿಗೆ ವ್ಯವಸ್ಥೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವಯೋಗಿ ಕಳಸದ, ನಾಳೆ ಕೆಎಸ್ಆರ್‌ಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗಲ್ಲ. ಪ್ರಯಾಣಿಕರ ಬೇಡಿಕೆಗಳಿಗೆ ಅನುಸಾರವಾಗಿ ಬಸ್ ಓಡಿಸುತ್ತೇವೆ. ಸಾರ್ವಜನಿಕರಿಗೂ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದು, ನಾಳೆ ಎಂದಿನಂತೆ ಬಸ್‍ಗಳು ಓಡಾಟ ನಡೆಸಲಿದೆ ಎಂದರು. ಇದನ್ನೂ ಓದಿ: ಭಾರತ್ ಬಂದ್ ದಿನ ಕರ್ನಾಟಕ ಬಂದ್‍ಗೆ ಕರೆ ಕೊಟ್ಟ ರೈತರು- ಯಾರ ಬೆಂಬಲವಿದೆ, ಯಾರದ್ದು ಇಲ್ಲ..?
Advertisement
Advertisement
ರೈತರು ಭಾರತ್ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆ ಜೊತೆ ಮಾತುಕತೆ ನಡೆಸಿದ್ದೇವೆ. ಯಾವುದೇ ಆಸ್ತಿಪಾಸ್ತಿ ಹಾನಿಯಾಗದ ಹಾಗೆ ನೋಡಿಕೊಳ್ಳತ್ತೇವೆ. ಕಿಡಿಗೇಡಿಗಳ ಕೃತ್ಯದ ಬಗ್ಗೆ ಸೂಕ್ತ ನಿಗಾವಹಿಸುತ್ತೇವೆ. ಈಗಾಗಲೇ ಶೇಕಡಾ 80 ಬಸ್ ಗಳನ್ನು ಓಡಾಟ ನಡೆಸುತ್ತಿದ್ದೇವೆ. ಅದಲ್ಲದೆ ಎಂದಿನಂತೆ ಆನ್‍ಲೈನ್‍ನಲ್ಲಿ ಸೀಟ್ ರಿಸರ್ವ್ ಮಾಡಬಹುದು ಸೋಮವಾರ ಯಾವುದೇ ಬದಲಾವಣೆ ಇಲ್ಲದೆ ಬಸ್‍ಗಳು ಸಂಚರಿಸಲಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ನೈತಿಕತೆ ಬೆಂಬಲ ಕೊಡಿ: ಕೋಡಿಹಳ್ಳಿ ಚಂದ್ರಶೇಖರ್
Advertisement